Thursday, October 12, 2017
*೧•ದಡವ ಸೇರಿಸು*
ಕಣ್ಣು ಕಾಣುತಿಲ್ಲ
ಕಿವಿಯೂ ಕೇಳುತಿಲ್ಲ
ನನ್ನ ಈ ಸ್ಥಿತಿಗೆ
ತಂದ ದೇವರೆ ನಿನಗೆ
ಕರುಣೆಯಿಲ್ಲ
ನನ್ನ ಕಂಬನಿಧಾರೆ ನಿಂತಿಲ್ಲ
ನನ್ನ ಮೇಲೆ ಏಕೆ ಮುನಿಸು
ನನ್ನಪರಾಧವ ನೀ ಮನ್ನಿಸು
ಅಬಲೆ ನಾನು
ಹಗಲೇ ಇರುಳ ಕಂಡೆನು
ನನಗೇ ಏಕಿಂತಾ ಶಿಕ್ಷೆ
ನೀ ನೀಡದಾದೆಯೇಕೆ ರಕ್ಷೆ
ದುಷ್ಟ ಕ್ರಿಮಿಯೊಂದು ಬಂದು
ನನ್ನ ಮೇಲೆಯೇ ಬಿದ್ದು
ಎದ್ದು ಹೋಗಿದೆ ನಾನ್ಹೇಗೇ
ಬಾಳಲಿ ಈಗ ದಾರಿ ಕಾಣದಾಗಿದೆ
ಕೈ ಹಿಡಿದು ನಡೆಸೋನು ನೀನೇ
ನನ್ನ ಕಾಪಾಡು ಓ ದೇವನೇ
ಹೆಬ್ಬುಲಿಗಳ ಮುಂದೆ
ನಾ ತಬ್ಬಲಿ ಈಗ
ಭಯದಿ ಬೊಬ್ಬಿಡುತಿರುವೆ
ಆಸರೆಗೆ ತಬ್ಬಲಿ ಯಾರನು ನಾನೀಗ
ನೀನೇ ದಾರಿ ತೋರಿಸು
ಕ್ಷೇಮದಿ ದಡವ ಸೇರಿಸು
0329ಪಿಎಂ16092017
*ಅಮುಭಾವಜೀವಿ*
ಕವಿಮಿತ್ರ ಭೀಮೇಶ್ ಅವರ ಪ್ರತಿಕ್ರಿಯೆ
ಹೆಣ್ಣಿನಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಇಡಿಯಾಗಿ ವ್ಯಕ್ತಪಡಿಸಿದ್ದೀರಿ..ಹಾಗೆಯೇ ದೈವದ ಕುರುಡುತನವನ್ನು ಕಾಣಿಸಿದ್ದೀರಿ..ಒಟ್ಟಾರೆ ಕವಿತೆ ಉತ್ತಮವಾಗಿದೆ
ಭವಾನಿ ಶಂಕರ್ ಅವರ ಪ್ರತಿಕ್ರಿಯೆ
ಅಬಲೆ ಹೆಣ್ಣಿನ ಕರುಣಾಜನಕ ಸ್ಥಿತಿಯನ್ನು ಕವಿಯೂ ಮನೋಜ್ಞವಾಗಿ ಅಭಿವ್ಯಕ್ತಪಡಿಸಿದ್ದಾರೆ. ಆಕೆಯ ಅಸಹಾಯಕತೆಯನ್ನು ಸಮಾಜದ ಮುಂದೆ ತರುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದುಷ್ಟನಿಂದ ಅತ್ಯಾಚಾರಕ್ಕೊಳಗಾಗಿ ಪರಿತಪಿಸುವ ಮುಗ್ಧ ಬಾಲೆಯ ದುಃಖವನ್ನು ಸಮಾಜದ ಮುಂದೆ ತೆರೆದಿಡುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದೇವರು ನಿಮ್ಮ ಪ್ರಯತ್ನಕ್ಕೆ ಫಲ ನೀಡಲಿ.
Subscribe to:
Post Comments (Atom)
No comments:
Post a Comment