Thursday, October 12, 2017

*ಚಿತ್ರ ಕವನ ಸ್ಪರ್ಧೆಗಾಗಿ* *ಮಳೆಯಿಲ್ಲದೆ* ನೆತ್ತಿಯು ಸುಡುತಿದೆ ನೆಲ ಬಿರುಕು ಬಿಟ್ಟಿದೆ ಮಳೆಗಾಗಿ ಮುಗಲತ್ತ ನೋಡುತ ಬದುಕು ಬಸವಳಿದು ಕೂತಿದೆ ಬಿತ್ತಿದ ಬೆಳೆ ಬತ್ತಿಹೋಗಿದೆ ಭರವಸೆ ಎಂಬುದು ಸತ್ತೇ ಹೋಗಿದೆ ಮಳೆಯಿಲ್ಲದೆ ಬರಿದಾಗಿದೆ ರೈತನ ಬದುಕು ಕಂಗಾಲಾಗಿದೆ ಬಂಜೆ ಮೋಡಗಳನು ಸಂಜೆವರೆಗೂ ನೋಡಿದರೂ ಹನಿ ಮಳೆ ಸುರಿಯದೇ ಕರಗಿ ಮಾಯವಾಗಿ ಹೋಗಿವೆ ಬರದ ಬೇಗೆ ಕಸಿದು ನಗೆ ಆಹಾಕಾರದ ಅಟ್ಟಹಾಸ ಮೆರೆಸಿದೆ ಒಣಗಿ ನಿಂತ ಮರ ಕೆರೆತೊರೆಗಳ ಮತ್ತೆ ಚಿಗುರಿಸುವುದನೇ ಮರೆತಿದೆ ತೊರೆದು ಬಿಡು ಮುನಿಸು ಮತ್ತೆ ತಂದು ಕೊಡು ಸೊಗಸು ರೈತನ ಮೊಗದಲ್ಲಿ ಮಂದಹಾಸ ಮೂಡಲಿ ಮತ್ತೊಂದು ವರ್ಷ 4:45ಪಿಎಂ23092017 *ಅಮುಭಾವಜೀವಿ*

No comments:

Post a Comment