*ಸಾಕು ಗೊಡವೆ*
ತಲ್ಲಣಿಸಿ ಚಡಪಡಿಸಿದೆ
ಮುಗ್ದೆ ರಾಧೆಯ ಜೀವ
ಕಂಡೂ ಕಾಣಂತೇಕಿರುವೆ
ಬಂದು ಸೇರೋ ಓ ಮಾಧವ
ಹಗಲಿರುಳು ನಿನ್ನ ಧ್ಯಾನ
ಅದಕಾಗಿ ನನ್ನ ಈ ಮೌನ
ಸಾಕು ಈ ಕಣ್ಣಾಮುಚ್ಚಾಲೆ
ಕನಿಕರಿಸಿ ಮುಖದೋರೀಗಲೆ
ಹೆಜ್ಜೆಹೆಜ್ಜೆಗೂ ನಿನ್ನ ಗೆಜ್ಜೆ ಸದ್ದು
ನನ್ನ ಮನವ ತಟ್ಟಿ ಎಚ್ಚರಿಸುತ್ತಿದೆ
ಮುಚ್ಚಿದ ಕಣ್ತೆರೆದು ನೋಡಲು
ಇಲ್ಲಿ ನಿನ್ನ ರೂಪ ಗೋಚರಿಸದಾಗಿದೆ
ಎಲ್ಲಿದ್ದೀರಿ ಬಂದು ಬಿಡು
ಪಾಪಿ ಜೀವಕೊಂದಿಷ್ಟು ಖುಷಿ ಕೊಡು
ನೆಮ್ಮದಿಯ ನಿಟ್ಟುಸಿರು ಬಿಡುವೆ
ಸಾಕು ನನಗೀ ಜೀವನದ ಗೊಡವೆ
1154ಎಎಂ01102017
*ಅಮುಭಾವಜೀವಿ*
No comments:
Post a Comment