Thursday, October 12, 2017

*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*

No comments:

Post a Comment