Thursday, October 12, 2017

*ಬದುಕಿನ ನಾಟಕಕೆ* ಮುಂಜಾನೆಯ ಇಬ್ಬನಿಯಲಿ ಹೊಂಬಣ್ಣದ ರಂಗನು ಚೆಲ್ಲಿ ಮೂಡಣ ದಿಗಂತದಿ ತೇಲಿ ಬಂದ ನೇಸರ ನಗುನಗುತಾ ಹಕ್ಕಿಯ ಕೊರಳಿಗೆ ದನಿಯಾಗಿ ಹರಿವ ನೀರಿಗೆ ಸ್ಪೂರ್ತಿಯಾಗಿ ಹೂಚೆಲುವಿನ ಅನಾವರಣಗೈದು ಅರುಣ ತಂದನ ನವೋದಯವ ಹೊಂಗಿರಣಗಳ ಸೈನ್ಯ ಕಳಿಸಿ ಮಲಗಿದ್ದ ಪ್ರಕೃತಿಯ ಎಬ್ಬಿಸಿ ಕತ್ತಲೆಯ ಪರದೆಯನೆತ್ತಿ ಬದುಕಿನ ನಾಟಕಕೆ ಚಾಲನೆಯಿತ್ತ ಮೋಡಗಳ ನಡುವೆ ಓಡೋಡಿ ಏರುತ ಬಂದ ಈ ಬಾನಾಡಿ ಬಿಸಿಲಿನ ಒಸಗೆಯ ತಂದು ಭೂಮಿಯ ಕನಸನು ಮೊಳೆಸಿದ ದಿನಕರ ಶುಭಕರ ನಮಗೆಂದೂ ಕಾಯಕದೀಕ್ಷೆಗೆ ಚೇತನ ಅವನೆಂದೂ ಬೆಳಕಿನ ಒಡೆಯಗೆ ನನ್ನ ನಮನ ಅವನಿಗಾಗಿ ಬರೆದೆ ಈ ಕವನ 0626ಎಎಂ20092017 *ಅಮುಭಾವಜೀವಿ*

No comments:

Post a Comment