Saturday, November 4, 2017

*೧• ವಸಂತದ ಗುರುತು* ಮನದೊಳಗೊಂದಾಸೆ ಚಿಗುರುತಿದೆ ಅದು ಬಾಳ ವಸಂತದ ಗುರುತಾಗಿದೆ ಹರೆಯದರಮನೆಯಲ್ಲಿ ಇಂದು ಒಲವಿನ ತೋರಣ ಕಟ್ಟಿದೆ ಪ್ರೀತಿಯ ಸವಿಭಾವವು ಏನೆಂದು ಪ್ರಿಯತಮೆಯ ಹೃದಯ ತಟ್ಟಿದೆ ಅವಳ ಕುಡಿನೋಟದ ಸೂಚನೆ ಹುಟ್ಟು ಹಾಕಿದೆ ನೂರು ಭಾವನೆ ನನ್ನೊಲವಿನ ನಿಷ್ಕಲ್ಮಶ ಆರಾಧನೆಗೆ ಅವಳ ಈ ನಗುವೆ ಸಂಭಾವನೆ ಹೃದಯದ ಕೋಗಿಲೆ ಹಾಡಿದೆ ಬದುಕಿಗೆ ಭವಿಷ್ಯ ನುಡಿದಿದೆ ಚಿಗುರು ತಂದ ಈ ಒಗರಿನಿಂದ ಜೀವನದಿ ಎಲ್ಲವೂ ಅಂದ ಆನಂದ ಪ್ರೀತಿಯೇ ನೀನಾದೆ ಬದುಕು ಅದೇ ವರವಾಯ್ತು ಎಲ್ಲದಕೂ ಇನ್ನಿಲ್ಲ ನನಗೆ ಬರದ ಚಿಂತೆ ನನ್ನವಳಿಹಳು ವರ್ಷಧಾರೆಯಂತೆ 0746ಎಎಂ03112017 *ಅಮುಭಾವಜೀವಿ*

No comments:

Post a Comment