*೧•ಈ ಮಿಲನ*
ಮೋಡ ಮೋಡಗಳ ಚುಂಬನ
ಗುಡುಗಿನ ಭಾರೀ ಆಕ್ರಂದನ
ನಮ್ಮಿಬ್ಬರ ಈ ಮಿಲನ
ಬದುಕಿಗೆ ಮಳೆಯಾಗಮನ
ಅಧರಗಳ ಈ ಸ್ಪರ್ಶ
ಮಳೆಯಲ್ಲಿ ನೆನೆದ ಹರ್ಷ
*೨•ಪ್ರೀತಿಪಾಲು*
ನಲ್ಲನ ಚುಂಬನಕೆ
ನಲ್ಲೆಯ ಹಣೆಯಲಿ
ಮುತ್ತುಗಳ ಸಾಲು
ಕೈ ಸೇರದೆ ಹೃದಯ
ಆಯ್ತು ಅವನ
ಪ್ರೀತಿಯ ಪಾಲು
*೩•ಆಕರ್ಷಣೆ*
ಮಳೆಯ ಚುಂಬನದಿಂದ
ಇಳೆಯೊಳಗೆ ನವಚೇತನ
ನಲ್ಲನ ಬಾಹುವಿನೊಳಗೆ
ನಲ್ಲೆಯ ಆತ್ಮ ಸಂಮಿಲನ
ಹೃದಯ ಹೃದಯಗಳ ಬದಲಾವಣೆ
ಪ್ರೀತಿ ತಂದ ಆಕರ್ಷಣೆ
*ಅಮುಭಾವಜೀವಿ*
No comments:
Post a Comment