Saturday, November 4, 2017

ಕವಿತೆ

*ಮನ ಮೆಚ್ಚಿದ ಹುಡುಗಿಗಾಗಿ* ಮಾಗಿ ಛಳಿಯು ಕೂಗಿ ಕರೆದಿದೆ ಮೌನಕೋಗಿಲೆ ಹಾಡು ಹಾಡಿದೆ ನವಿಲ ನಾಟ್ಯ ಮನವ ಸೆಳೆದಿದೆ ಮನ ಮೆಚ್ಚಿದ ಹುಡುಗಿಗಾಗಿ ಮೇಘ ಕರಗಿ ಮಳೆ ಸುರಿದಿದೆ ಬರಡು ನೆಲ ಹಸಿರಾಗಿದೆ ಕೊರಡು ಕೊನರಿ ತೆನೆ ತೂಗಿದೆ ಮನ ಮೆಚ್ಚಿದ ಹುಡುಗಿಗಾಗಿ ಬತ್ತಿದ ನದಿ ಉಕ್ಕಿ ಹರಿದಿದೆ ಉಕ್ಕುವಲೆ ತೀರವನು ರಂಜಿಸಿದೆ ತೀರದಾಸೆಯೀಗ ಕೈಗೂಡಿದೆ ಮನ ಮೆಚ್ಚಿದ ಹುಡುಗಿಗಾಗಿ ಬವಣೆ ದೂರ ಓಡಿದೆ ನೆನಪು ನೂರು ಕಾಡಿದೆ ಹೃದಯ ತಾನೇ ಗುನುಗಿದೆ ಮನ ಮೆಚ್ಚಿದ ಹುಡುಗಿಗಾಗಿ ಯಾರವಳು ಎಲ್ಲಿಹಳು ಕರೆತನ್ನಿ ಚಂದ್ರನ ಮಗಳು ಭೂತಾಯ ಮಡಿಲು ಕನವರಿಸಿದ ಕನಸಿನ ರೂಪದವಳು ನನ್ನ ಮೆಚ್ಚಿದ ಹುಡುಗಿ 0416ಪಿಎಂ21102017 *ಅಮುಭಾವಜೀವಿ* ಸ್ಪರ್ಧಾ ವೇದಿಕೆ ಸ್ಪರ್ಧೆಗೆ

No comments:

Post a Comment