Saturday, November 4, 2017

ಹಚ್ಚಿಟ್ಟ ಹಣತೆ ಕನ್ನಡ ಜ್ಯೋತಿಯಾಯ್ತು ಬೀಸುವ ಗಾಳಿ ಕನ್ನಡ ಕಂಪು ಹರಡಿತು ಹರಿವ ನೀರು ಕನ್ನಡ ಕಲರವ ಸಾರಿತು ಬಾಳವ ನೆಲ ಕನ್ನಡ ಕುಲವ ಪೋಷಿಸಿತು ನುಡಿವ ಮಾತೆಲ್ಲವೂ ಕನ್ನಡ ನಡೆವ ಹಾದಿಯೆಲ್ಲವೂ ಕನ್ನಡ ಹೆಜ್ಜೆ ಗೆಜ್ಜೆಯ ದನಿಯೂ ಕನ್ನಡ ಸಿಹಿ ಸಜ್ಜಿಗೆಯ ಸವಿಯೂ ಕನ್ನಡ ಒಬ್ಬರನೊಬ್ಬರ ಬೆಸೆದ ಸ್ನೇಹ ಕನ್ನಡ ಭಿನ್ನತೆಯೊಳಗೂ ಏಕತೆ ಸಾರಿದ ಕನ್ನಡ ನಾಡು ನುಡಿಯಲೊಂದಾದ ಕನ್ನಡ ಹಾಡು ಪಾಡು ಎಲ್ಲವೂ ಕನ್ನಡ ಶರಣರುಲಿದ ವಚನವೆಲ್ಲ ಕನ್ನಡ ಷರೀಫಜ್ಜನ ತತ್ವಪದವು ಕನ್ನಡ ದಾಸರ ಭಜನೆ ಕೀರ್ತನೆ ಕನ್ನಡ ಕವಿಪುಂಗವರ ಸಾಲೆಲ್ಲವೂ ಕನ್ನಡ ಕಟ್ಟಿದ ಗುಡಿಗೋಪುರ ಕನ್ನಡ ಉಕ್ಕಿ ಬರುವ ನೂಪರವೂ ಕನ್ನಡ ಮಹಲು ಗುಡಿಸಲು ನಿಂತ ನೆಲೆ ಕನ್ನಡ ಕಲ್ಲು ಕಲ್ಲಿನಲಿ ಅರಳಿದ ಕಲೆ ಕನ್ನಡ ನಾಡ ಸಂಸ್ಕೃತಿಯ ತಿಲಕ ಕನ್ನಡ ಪ್ರತಿ ಹೃದಯದ ಮಿಡಿತ ಕನ್ನಡ ಕರುನಾಡಿನೊಳಗಿರುವುದೆಲ್ಲವೂ ಕನ್ನಡ ಹುಟ್ಟಿನಿಂದ ನಂಟು ಹೊಂದಿದ ಕನ್ನಡ ಎಂದೆಂದಿಗೂ ಅಮರ ಕನ್ನಡ ಸುಖ ದುಃಖದಲ್ಲೂ ಇದೆ ಸಂಗಡ ೦೫೩೨ಮು೦೧೧೧೨೦೧೭ *ಅಮುಭಾವಜೀವಿ*

No comments:

Post a Comment