Tuesday, March 12, 2019

ಹೇಳದೇ ಹೇಗಿರಲಿ

ಹೇಳದೆ ಹೇಗಿರಲಿ

ಹೇಳದೇ ಹೇಗಿರಲಿ
ನಾನುಂಡ ಸಂಕಟವ
ನಾಗರೀಕ ಮಾನವ
ನನಗೆ ಮಾಡಿದ ಕಪಟವ

ನನ್ನದೇ ಕುಲದೊಳಗೆ ಹುಟ್ಟಿ
ನನ್ನಂತಹವಳನ್ನೇ ಕೈಹಿಡಿದು
ಕಾಮಪ್ರೇಮದಾಟಕೆ ಬೆಸೆದ
ಮದುವೆಯ ಬಂಧವದು

ಹೆಣ್ಣೆಂಬ ಒಂದೇ ಕಾರಣಕ್ಕೆ
ಗರ್ಭದಲೇ ಕೊಲ್ಲಹೊರಟರು ನನ್ನ
ಹೆಣ್ಣಲ್ಲವೇ ಇವರನೆಲ್ಲ ಸಲಹಿದ್ದು
ಆದರೂ ತಿರಸ್ಕರಿಸುವರೇಕೆ ನನ್ನ ?

ಚಿಕ್ಕ ಬಾಲೆ ಎಂದೂ ನೋಡದೆ
ಗಂಡಿನ ಕಾಮತೃಷೆಗೆ ಬಲಿಯಾದೆ
ಮಾನವೀಯತೆಯನ್ನೇ ಮರೆತರೆ
ಪಶುವಿಗೂ ಹೀನವಾಗಿ ಹೋದರೆ !?

ಮನೆ ಬೆಳಗ ಬಂದವಳನ್ನೇ
ವರದಕ್ಷಿಣೆಗಾಗಿ ಸುಟ್ಟರು
ನನ್ನ ಬದುಕಿಗಿಂತ ಇವರಿಗೆ
ಆಸೆಯೇ ಹಣದ ಮೇಲೆ ?

ಹೆತ್ತು ಹೊತ್ತು ಸಲಹಿದ್ದರೂ
ಮುತ್ತಿನ ಮಾತಿಗೆ ಬಲಿಕೊಟ್ಟರು
ಹಸಿವೇ ಇರದಂತೆ ಬೆಳೆಸಿದ್ದರೂ
ಅನ್ನ ನೀರು ಕೊಡದೆ ಬೀದಿಗೆ ತಳ್ಳಿದರು

ಏನು ಹೇಳಲಿ ಇವರ ರೀತಿಗೆ
ಬೆಲೆ ಇಲ್ಲದಾಯ್ತೆ ನಾನಿತ್ತ ಪ್ರೀತಿಗೆ
ಹೆಣ್ಣೆಂಬ ಕಾರಣಕ್ಕೆ
ನಾ ನಿತ್ಯ ನೊಂದು ಬಾಳಬೇಕೇ?

0102ಪಿಎಂ24122014

ಅಮುಭಾವಜೀವಿ


No comments:

Post a Comment