ಕಾಣದ ಕಣ್ಣಿಗೆ ಲೋಕವೇ ಕತ್ತಲೆ
ಕಾಣುವ ಕಣ್ಣಿಗೆ ನೋಟವೇ ಕಾಮಾಲೆ,
ಬಾಳುವ ದಾರಿಯ ಬದುಕುವ ಗುರಿಗೆ
ವಿಘ್ನಗಳು ನೂರಾರು
ತನ್ನ ಪಾಡಿಗೆ ತಾನಿದ್ದರೂ
ಅನುಮಾನದಿ ಸುತ್ತುವ ಹಲವರು
ಅರಳೋ ಹೂವಿಗೆ ಚೆಲುವ
ಬಿತ್ತರಿಸುವ ಧ್ಯಾನ
ಹರಸೋ ನೆಪದಿ ಕೈಗಳಿಗೆ
ಹೂ ಕೀಳುವತ್ತ ಗಮನ
ಹಾಡೋ ಹಕ್ಕಿಗೆ ಬೇಕಿಲ್ಲ ಸನ್ಮಾನ
ಕರೆದು ಮಾಡುವರಲ್ಲಿ ಅವಮಾನ
ಬಯಸದೇ ಬಂದ ಈ ನೋವಿಗೆ
ಭಾವ ತುಂಬಿ ಹಾಡಿತು ಹಾಡಿಗೆ
ನಡೆವ ಹಾದಿಯ ನಂಬಿ
ನಡೆವವನ ತಡೆದು,
ದಿಕ್ಕು ತಪ್ಪಿಸಿ ದೂರ ಸಾಗಿಸಿ
ಬೆನ್ನ ಹಿಂದೆ ನಗುವರು ಗಹಗಹಿಸಿ
ಬಿದ್ದವನ ಎತ್ತಲು ಕೈಯಿಲ್ಲದವರ
ಬಣ್ಣ ಬಯಲಾಯಿತು,
ಬಿದ್ದಾಗ ಕಲ್ಲೆಸೆದು ಕೈಕಟ್ಟಿ ನಿಂತ
ಕಪಟಿಗಳ ಕಾಲ ಕಾಲೆಳೆದಿತ್ತು
0258ಎಎಂ06032016
**ಅಮು**
No comments:
Post a Comment