ಕನಸು
ಕಂಡ ಕನಸುಗಳೆಲ್ಲ
ನನಸಾಗುವುದಿಲ್ಲ
ಇರುಳ ಕನಸಗಳೆಲ್ಲ
ನಿದಿರೆ ಭಂಗಗೊಳಿಸುವುದಲ್ಲ
ಏನೇನೋ ಭಾವಗಳು
ಅದು ಏನೇನೋ ಕಲ್ಪನೆಗಳು
ಎಚ್ಚರ ಆದ ಮೇಲೆ ಇರುವುದೇ ಇಲ್ಲ
ಎಚ್ಚರಗೊಳಿಸಿ ಎದುರಿಸುದಲ್ಲ
ಎಲ್ಲಾ ಎಲ್ಲೆಗಳ ಮೀರಿ
ಕನಸಿಗೆ ಬಂದುದ ತೋರಿ
ಮನಸನ್ನು ಘಾಸಿಗೊಳಿಸಿ
ಕಾಡುವ ಕೆಟ್ಟ ಕನಸು
ಬದುಕಿನ ನಿರಾಸೆಗೆ
ಉತ್ತರವಾಗೋ ಕನಸು
ಈಡೇರದಾಸೆಗಳಲ್ಲೆ ಕೈಗೂಡಿ
ಮನವ ನಿರಾಳಗೊಳಿಸೋ ಕನಸು
ಇರುಳು ಕಾಣುವ ಕನಸಿಗೆ
ಯಾವ ಅರ್ಥವೂ ಇಲ್ಲ
ಸಾಧಿಸುವ ಹಂಬಲದಿಂದ ಕಂಡ
ಕನಸು ಬದುಕಿನ ಉನ್ನತಿಗೊಯ್ಯುವುದು
ಕನಸ ಕಾಣಬೇಕು ನಿತ್ಯ
ಅದು ಮನದ ಕಾಯಿಲೆಗೆ ಪಥ್ಯ
ಹಗಲು ಕಂಡ ಕನಸು ಎಂದೂ
ಗುರಿ ಸಾಧನೆಗೆ ಸ್ಪೂರ್ತಿಯಾಗುವುದು
0509ಎಎಂ28022019
ಅಮು ಭಾವಜೀವಿ
No comments:
Post a Comment