Sunday, March 31, 2019

ದನಿಯಾದವಳು

*ದನಿಯಾದವಳು*

ಏನೆಂದು ಬರೆಯಲಿ
ಪದಗಳೇ ನಿಲುಕುತಿಲ್ಲ
ನಿನ್ನ ಗುಣಗಾನ ಮಾಡಲು
ಮುಂಜಾನೆ ಹೊತ್ತಲ್ಲಿ
ಮೂಡಣದ ಬಯಲಲ್ಲಿ
ನೀ ರಂಗಾದ ಮುಗಿಲು

ಬವಣೆಗಳ ನೀಗುವ
ಬದುಕಿನಲಿ ಹೇಗುವ
ಶ್ರಮ ಜೀವಿ ನೀನು
ಸಮರಸದ ಜೀವನದಿ
ಸವಿಭಾವ ತಂದು
ಸುಖವ ನೀಡಿದೆ ನೀನು

ವಸಂತ ಕಾಲದಲ್ಲಿ
ಹಾಡುವ ಕೋಗಿಲೆಗೆ
ದನಿಯಾದವಳು ನೀನಲ್ಲವೇನು
ನನ್ನ ನಾಳೆಗಳ ನೆಮ್ಮದಿಗೆ
ಟೊಂಕ ಕಟ್ಟಿ ನಿಂತು
ನಿತ್ಯ ಸಲಹುವ ದೇವಿ ನೀನು

ಜೀವವಿರುವವರೆಗೂ
ನಿನ್ನ ಮಡಿಲಾಸರೆಯ
ಬಯಸಿದೆ ಈ ಪಾಪಿ ಬಡಜೀವ
ಯಾವ ಜನ್ಮದ ಮೈತ್ರಿಯೋ
ಇದು ನನ್ನ ಕಾಪಾಡಿದ
ಕರುಣೆ ತುಂಬಿದ ಭಾವ

0853ಎಎಂ01042019

*ಅಮು ಭಾವಜೀವಿ*

No comments:

Post a Comment