*೧ ಸೃಷ್ಟಿಕರ್ತೆ*
ಜೀವ ಸಂಕುಲದ ಸೃಷ್ಟಿಕರ್ತೆ
ಮಾನವೀಯತೆಯ ಮಹಾ ಪೋಷಿತೆ
ಮಮಕಾರದ ಮಹಾಮಾತೆ
ಮಹಿಳೆ ನೀ ಸದಾ ವಂದಿತೆ
ಹಸಿವ ತಡೆದು ನಮ್ಮ ಹಸಿವ ನೀಗಿದವಳು
ನೋವನ್ನು ಸಹಿಸಿಯೂ ನಲಿವ ನೀಡುವವಳು
ಶೋಷಣೆಯ ನಡುವೆಯೂ ಪೋಷಣೆ ಮಾಡುವವಳು
ಮಹಿಳೆ ನೀ ಸದಾ ನಮ್ಮ ಕಾಯೋ ದೇವತೆ
ಪ್ರಾಣದ ಹಂಗು ತೊರೆದು ಜೀವ ನೀಡುವೆ
ಗಂಡಿನಹಂಕಾರದ ಮುಂದೆ ನಿತ್ರಾಣಗೊಂಡಿರುವೆ
ಸಂಪ್ರದಾಯದ ಹೆಸರಿನಲ್ಲಿ ಬಂಧಿಯಾಗಿರುವೆ
ಮಹಿಳೆ ನೀ ಸದಾ ಶೋಷಿತೆ
ತಾಯಿ ಗೆಳತಿ ಸೋದರಿ ಸತಿ
ನಾನಾ ರೂಪಗಳು ನಾನಾ ದೀಪಗಳು
ನೀನಿಲ್ಲದೆ ಈ ಬದುಕು ಬದುಕದು
ಮಹಿಳೆ ನೀ ಸದಾ ಬಾಳ ಜ್ಯೋತಿ
ದೌರ್ಜನ್ಯಗಳ ಮೊದಲ ಬಲಿ ನೀನು
ದಾರಿದ್ರ್ಯದಲ್ಲೂ ದಯೆ ತೋರುವೆ ನೀನು
ಜಗದುಳಿವಿನ ಮೂಲ ನೀನು
ಮಹಿಳೆ ನೀನರಲು ನಮಗೊಂದು ಘನತೆ
0724ಎಎಂ08032017
*ಅಮುಭಾವಜೀವಿ*
No comments:
Post a Comment