Friday, March 8, 2019

ನನ್ನವಳು

ನನ್ನ ಕೈ ಹಿಡಿದ ಹೆಣ್ಣು
ನೆಮ್ಮದಿ ಬದುಕಿನ ಕಣ್ಣು
ಸದಾ ಸ್ಪೂರ್ತಿಯ ಚಿಲುಮೆ
ಬೆಲೆ ಕಟ್ಟಲಾಗದು ಅವಳ ಒಲುಮೆ

ಸ್ತ್ರೀ ಕುಲದ ಹೆಮ್ಮೆ ಇವಳು
ನನ್ನ ಬಾಳ ಹಿರಿಮೆ ಇವಳು
ಚಂದನದಂತೆ ತೇದ ಒಡಲು
ಸ್ಪಂದನೆಯ ತಾಯಿ ಮಡಿಲು

ಅಧಮ್ಯ ಚೇತನದ ಕನಸುಗಾತಿ
ದುಡಿದು ದಣಿಯದ ಬಾಳ ಒಡತಿ
ರಕ್ತ ಸಂಬಂಧದ ನಂಟು ಬೆಸೆದ ಗೆಳತಿ
ಇವಳೆನ್ನ ಪ್ರತಿ ಕ್ಷಣದ ಅಗಾಧ ಸ್ಪೂರ್ತಿ

ನಿಸ್ವಾರ್ಥದ ಸೇವೆಗೆ ಇವಳೇ ಸಾಟಿ
ನಿಷ್ಕಲ್ಮಶ ಪ್ರೀತಿ ತೋರಿದ ಬಾಳ ಮೇಟಿ
ನನ್ನ ನಡವಳಿಕೆಯನೇ ತಿದ್ದಿತೀಡಿ
ಜಗದೆದುರು ಪ್ರಜ್ವಲಿಸಿದ ಒಡನಾಡಿ

ನನಗಿವಳು ಬದುಕಿತ್ತ ಉಡುಗೊರೆ
ನೀನಾದೆ ಇವಳಿಂದ ದೊರೆ
ತಾಯ ಕುಲದ ಕಣ್ಮಣಿ
ಈ ನನ್ನ ಸಹಧರ್ಮಿಣಿ

ನನ್ನ ತಪ್ಪು ಮನ್ನಿಸೆಂದು ಬೇಡುವೆ
ಈ ದಿನದ ಶುಭಾಶಯವ ಕೋರುವೆ

0652ಎಎಂ08032018

ಅಮು ಭಾವಜೀವಿ

No comments:

Post a Comment