Tuesday, March 5, 2019

ಬರಿಗೈಯಾದರೇ

*ಬರಿಗೈಯಾದರೇ......*

ಇಲ್ಲಿ ನಿನ್ನ ತನಕೆ ಬೆಲೆಯಿಲ್ಲ
ತಲೆಬಾಗಿ ನಡೆಯದೆ ನೆಲೆಯಿಲ್ಲ

ಇದ್ದರೆ ನಿನ್ನಲಿ ಸಕ್ಕರೆ
ಉಕ್ಕಿ ಹರಿಯುವುದು ಅಕ್ಕರೆ
ಬರಿಗೈ ನಿನ್ನದಾದರೆ
ತಿರುಗಿ ನೋಡರು ನಿನ್ನ ಕಡೆ

ಕೊಟ್ಟುದುದಕೆಲ್ಲ ಹಂಗಿಸುತ
ಚುಚ್ಚು ಮಾತಲ್ಲಿ ದಂಡಿಸುತ
ಆಡಿಕೊಳ್ಳುವರು ಆಪ್ತತೆಯಿಲ್ಲದೆ
ನಿನ್ನ ತ್ಯಾಗದ ಅನುಕಂಪವಿಲ್ಲದೆ

ಹಳ್ಳಕೆ ಬಿದ್ದರೆ ಆಳಿಗೊಂದು
ಕಲ್ಲನೆಸೆಯುವರು ಬಿದ್ದನೆಂದು
ಏಳುವ ಛಲ ನಿನ್ನದಾಗಲಿ
ನಿನ್ನ ಗೆಲುವು ಉತ್ತರವಾಗಲಿ

ಸೋತವನ ಸಾಯಲೂ ಬಿಡದೆ
ಹಸಿವಿಗೆ ತುತ್ತನೂ ಇಡದೆ
ಸ್ವತಂತ್ರವಾಗಿ ಬದುಕಲು ಬಿಡದೆ
ಅತಂತ್ರಕೆ ಸಿಲುಕಿಸಿ ಕುತಂತ್ರವ ಗೆಲಿಸುವರು

ಬಿದ್ದ ಒಂದೊಂದು ಏಟಿನಿಂದ
ಪಾಠ ಕಲಿತು ಪ್ರತಿಭಟಿಸು
ನಿನ್ನ ಪ್ರೀತಿ ತನವ ಉಳಿವಿಗಾಗಿ
ನಿತ್ಯ ಹೋರಾಡಿ ಜಯಿಸು

1046ಪಿಎಂ05032019

ಅಮು ಭಾವಜೀವಿ

No comments:

Post a Comment