ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡುವುದಕ್ಕಾಗಿ ಜನ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ತನ್ನ ಕ್ಷೇತ್ರದಲ್ಲಿ ತನ್ನ ಪಾಲಿನ ಕೆಲಸವನ್ನು ಮಾಡುತ್ತಾ ಹೋಗುವವರಿಗೆ ಇಂಥ ಜನರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸಾಕಷ್ಟು ನೋವನ್ನು ಕೊಡುತ್ತಾರೆ. ನಮ್ಮ ಬಗ್ಗೆ ಆಡಿಕೊಳ್ಳುವ ಜನರ ವ್ಯಕ್ತಿತ್ವ ಅವರ ನಡೆನುಡಿ ಎಲ್ಲವೂ ಅರಿವಿದ್ದರೂ ಕೂಡ ನಾವು ಸುಮ್ಮನಿದ್ದು ನಮ್ಮ ಪಾಡಿಗೆ ನಾವು ಇದ್ದರೂ ಕೂಡ ಅವರಿಗೆ ತೊಂದರೆ ಕೊಡದೆ ಹೋದರೆ ಚಂದ ಅನ್ನವು ಜೀರ್ಣವಾಗದೆ ಇರಬಹುದು ಆದರೆ ಅಂತಹ ವ್ಯಕ್ತಿಗಳ ನಕಾರಾತ್ಮಕ ಅಂಶಗಳು ಎಂದು ನಮ್ಮ ವ್ಯಕ್ತಿತ್ವವನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಬೆಳೆಯುವವನಿಗೆ ನೂರಾರು ಅಡ್ಡಿಗಳು. ಇಲ್ಲಿ ಎಲ್ಲವೂ ತೀರ್ಮಾನವಾಗುವುದು ಅವರವರ ಮೂಗಿನ ನೇರಕ್ಕೆ ಹೊರತು ವ್ಯಕ್ತಿಯ ವ್ಯಕ್ತಿತ್ವದ ಮೇಲಲ್ಲ. ಪ್ರತಿಯೊಬ್ಬರ ಪಯಣ ಇನ್ಯಾರದೋ ಅಭಿಪ್ರಾಯಕ್ಕೆ ಇನ್ಯಾರದೋ ಪ್ರಶಂಸೆಗೆ ಅಥವಾ ತಳಬುಡಗಳಿಲ್ಲದ ಆರೋಪ ಮಾಡುವವರ ಸಹಾಯದಿಂದ ಸಾಗುವುದಿಲ್ಲ. ಬದಲಾಗಿ ಅದು ಅವರವರ ಪರಿಶ್ರಮ ಅವರು ನಂಬಿರುವ ತತ್ವ-ಸಿದ್ಧಾಂತಗಳು ಆದರ್ಶಗಳು ಸಾಧಿಸಬೇಕೆಂಬ ಅಚಲ ವಿಶ್ವಾಸದಿಂದ ಗುರಿಯೆಡೆಗೆ ಸಾಗಿ ಬಂದಿರುತ್ತಾನೆ.
No comments:
Post a Comment