Saturday, July 23, 2022

ಕವಿತೆ

ಮಾತು ಮೂಕವಾಗಿದೆ
ಹೃದಯ ಭಾರವಾಗಿದೆ

ಹೆತ್ತ ಒಡಲು ಕಷ್ಟ ಪಡಲು
ಅಸಹಾಯಕವಾಗಿವೆ ಕೈಗಳು
ಪ್ರೀತಿ ಕೊಟ್ಟ ಜೀವ ಹಾಸಿಗೆ ಹಿಡಿದಿರಲು
ಅನಾಥ ಭಾವ ಕಾಡಿದೆ ಹಗಲಿರುಳು 
ನನಗೇ ಏಕೆ ಇಂಥ ಶಿಕ್ಷೆ
ಅಂತ್ಯವಿರದ  ಈ ಪರೀಕ್ಷೆ 

ನೋಡಲಾಗದ ಕಂಗಳಲಿ
ಬರೀ ಕಂಬನಿಯು ಜಿನುಗಿದೆ
ಮೌನ ತಳೆದ ವದನದಲಿ
ನಗುವದೇಕೆ ಮಾಯವಾಗಿದೆ
ಜಗವ ತೋರಿದ ಜನುಮದಾತೆ
ಮಲಗಿದಳೇಕೆ ಮಾತಾಡದಂತೆ

ಉಸಿರು ಹೆಸರು ಎಲ್ಲಾ ಕೊಟ್ಟು 
ಹಸಿವೆಯನ್ನು ಬಹು ದೂರವಿಟ್ಟು
ಸಹಿಸಿ ಎಲ್ಲಾ ಸಂಕಷ್ಟಗಳ ಬದಿಗಿಟ್ಟು 
ಸಾ(ವ)ಸಿವೆಯನರಸಿ ಹೊರಟರದೇನು ಗುಟ್ಟು
ಎದೆಯೊಳಗಿನ  ಅನಾಥ ಭಾವ 
ತಡೆಯಲಾಗದು ಈ ನೋವ

0631ಎಎಂ24072022 
*ಅಮುಭಾವಜೀವಿ ಮುಸ್ಟೂರು*





No comments:

Post a Comment