ಬೇಡವೆಂದರೂ ನೀ
ಮತ್ತೆ ಬೀಳುವೆ ಕಣ್ಣಿಗೆ
ಮರೆಯ ಬೇಕೆಂದರೂ ನೀ
ಆಸೆ ಹುಟ್ಟಿಸುವೆ ಮನಸಿಗೆ
ನನಗೆ ಗೊತ್ತು ನೀನೆಂದೂ
ಸಿಗದ ಹುಳಿದ್ರಾಕ್ಷಿ ಎಂದು
ಎಲ್ಲ ಮರೆತಿರುವಾಗ ನೀ ಬಂದು
ಭೂತಕೆ ತಳ್ಳುವೆ ಅಲ್ಲಿಗೇ ಹೋಗೆಂದು
ನಾ ಭ್ರಮನಿರಸನಗೊಂಡು
ಬದುಕನ್ನೇ ಬೇಡವೆನ್ನುವ
ತೀರ್ಮಾನಕ್ಕೆ ಗಟ್ಟಿ ಅಂಟಿಕೊಳ್ಳುವಾಗಲೇ
ಚಿತ್ತ ಚಂಚಲಿಸಿದೆ
ಆಶಾಗೋಪುರವೆಂದೋ ಕಳಚಿತ್ತು
ಒಲವ ನೂಪುರ ಒಡೆದು ಹಾಳಾಗಿತ್ತು
ಮರಳುರಾಶಿಯನ್ನ ಆಗಲೇ ಮುಚ್ಚಿತ್ತು
ನೀನದರ ಗುಟ್ಟ ಒಡೆಯಬೇಡ್ಹೋಗು
ಬಡವನ ಪಾಡು
ದಡವಿಲ್ಲದ ಗೂಡು
ಎಲ್ಲ ಒಣಗಿರುವಾಗ ಕಿಚ್ಚು
ಹಚ್ಚಿ ನಾಶಗೈಯುವುದು ಬೇಡ
ನಿನ್ನ ಜಾಡ ನೀ ಹಿಡಿದು ನಡೆ
ಕಣ್ಣೆತ್ತಿ ನೋಡದೆ ನನ್ನ ಕಡೆ
ಬದುಕು ಕಲಿಸಿದೀ ಪಾಠ
ಬಾಳಗೀತೆಗಿದೇ ಮುಖಪುಟ.
0610ಪಿಎಂ150715
##ಅಮು##
No comments:
Post a Comment