Saturday, July 23, 2022

ಕವನ

ಅಮ್ಮನೆಂಬ ದೈವವಲ್ಲಿ
ನೊಂದುಕೊಂಡು ಮಲಗಿದೆ
ಅದರ ನೋವ ಕಂಡು ಇಲ್ಲಿ 
ಜೀವ ಜೀವನ ನಲುಗಿದೆ

ಅವರನ್ನು ಮಾಸ ಹೊತ್ತ ಜೀವ
ಜನನದಲ್ಲಿ ಸಹಿಸಿ ಅಗಾಧ ನೋವ
ಜನ್ಮ ಕೊಟ್ಟ ಅವಳ  ಋಣವ
ಇಡೀ ಬದುಕು ಸಾಲದು ತೀರಿಸಲು

ತಾಯಿ ಪ್ರೀತಿ ಮುಂದೆ 
ಎಲ್ಲವೂ ತೃಣ ಜಗದಲಿ
ತಾಯಿ ಮಡಿಲ ತವರಿರಲು
ಎಲ್ಲಾ ನೋವಿಗುಪಶಮನ ಬದುಕಲಿ

ಅಂತ ಜೀವಕೇಕಿಂತ ನೋವ ಕೊಟ್ಟ 
ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟ
ದೇವರೇ ನೀ ಬರೀ ಕಲ್ಲು ತಾಯ ಮುಂದೆ
ನೀನಿರುವ ನಂಬಿಕೆ ನೀಗಿತು ಇಂದಿನಿಂದೆ

ಅಮ್ಮ ನೀನಿಲ್ಲದೆ ಬದುಕು  ಅನಾಥ
ನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತ
ಬೇಗ ಹೊರ ಬಾ ದೈವವೇ ಆ ನೋವಿನಿಂದ 
ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ

0517ಎಎಂ22072022
*ಅಮುಭಾವಜೀವಿ ಮುಸ್ಟೂರು*

No comments:

Post a Comment