Saturday, July 23, 2022

ಕವನ

ಎಲ್ಲಾ ನೋವ ಸಹಿಕೊಂಡೆ
ಎಲ್ಲಾ  ಅವಮಾನ ನುಂಗಿಕೊಂಡೆ
ಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲ
ಉತ್ತರವಾಗಿ ತೋರಿದೆ

ಅಪ್ಪನೆಂಬ  ಆಗದಡಿಯಲಿ
ಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆ
ಹೆಮ್ಮೆಯ ಬದುಕು ನಮ್ಮದಾಗಿಸಿದೆ
ಸಾಟಿ ಏನುಂಟು ನಿನಗೆ ಜಗದಲಿ

ಬೇಕು ಬೇಡಗಳ ಪೂರೈಸಿದಂತ ಜೀವ
ಸುಖ ದುಃಖಕೂ ಮಡಿಲಾದ ಭಾವ
ಯಾವ ನಂಟೂ ಅಂಟಲಾರದು
ಅಮ್ಮನುಂಟು ಎಂಬ ಭರವಸೆಯ ಮುಂದೆ 

ಹೆಣ್ಣು ತಾಯಾಗಲು ಜಗಕೆ ಬಲು ಖುಷಿ 
ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ 
ಕಲ್ಲು ದೇವರ ಬಲ್ಲವರಾರಿಲ್ಲ
ಮಾತೃ ದೇವರ ಮುಂದೆ ಮತ್ಯಾರಿಲ್ಲ

ಹಸಿವಿಗಮೃತವಿತ್ತು ಬೆಳೆಸಿದವಳು ತಾಯಿ
ಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿ
ಜೀವವಿತ್ತವಳ ಋಣವ ತೀರಿಸಲಾದೀತೆ
ಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ

0549ಎಎಂ22072022
 *ಅಮುಭಾವಜೀವಿ ಮುಸ್ಟೂರು*

No comments:

Post a Comment