Saturday, July 23, 2022

ಕವನ

ಹೇಗೆ ಸಹಿಸಲಿ ತಾಯಿ ನಿನ್ನ 
ಇಂತಹ ಸ್ಥಿತಿಯಲ್ಲಿ ಕಂಡು 
ಕರುಣೆಯಿರದ ದೈವವ
ಕ್ಷಮಿಸಲಾರೆ ಎಂದೆಂದಿಗೂ 

ಕಲ್ಮಶವಿಲ್ಲದ ಮುಗ್ಧ ಜೀವ 
ಏಕೆ ಸಹಿಸಬೇಕಿಂತ ನೋವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಅಸಹಾಯಕನಾದೆಯಾ ಮಾಡಲು ರಕ್ಷೆ

ದಣಿವಿಲ್ಲದೆ ದುಡಿದು ಸಲುಹಿತ್ತು
ಇಳಿ ವಯಸಲೂ ನೋಯಬೇಕೆ
ಇಂತ ಮೋಸಗೈವ ನಿನಗೇಕೆ ಬೇಕು 
ನಿತ್ಯ ಪೂಜೆ ಆರತಿ ಅಭಿಷೇಕ 

ಹೆತ್ತವಳ ಆಪತ್ತಿನಿಂದ ಬಿಡಿಸು
ಮಕ್ಕಳಿರುವೆವು ಸಲಹಲು
ಕಲ್ಲು ನೀನು  ಅರಿಯಲಾರೆ
ತಾಯಿ ಮಮತೆಯ ವಾತ್ಸಲ್ಯ 

ಬವಣೆಯ ನೀಗಿಸು ತಪ್ಪು ನಿಲ್ಲಿಸು
ಅಮ್ಮನೆಂಬ ಜೀವವ ಬದುಕಿಸು
ಜನ್ಮವಿರುವವರೆಗೆ ಋಣಿಯಾಗಿರುವೆ
ನಮ್ಮ ತಾಯಿಯ ನಮಗೊಪ್ಪಿಸು

1120ಪಿಎಂ24072022
 *,ಅಮುಭಾವಜೀವಿ ಮುಸ್ಟೂರು*

No comments:

Post a Comment