ಎಲ್ಲಾ ನೋವ ಸಹಿಕೊಂಡೆಎಲ್ಲಾ ಅವಮಾನ ನುಂಗಿಕೊಂಡೆಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲಉತ್ತರವಾಗಿ ತೋರಿದೆಅಪ್ಪನೆಂಬ ಆಗದಡಿಯಲಿಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆಹೆಮ್ಮೆಯ ಬದುಕು ನಮ್ಮದಾಗಿಸಿದೆಸಾಟಿ ಏನುಂಟು ನಿನಗೆ ಜಗದಲಿಬೇಕು ಬೇಡಗಳ ಪೂರೈಸಿದಂತ ಜೀವಸುಖ ದುಃಖಕೂ ಮಡಿಲಾದ ಭಾವಯಾವ ನಂಟೂ ಅಂಟಲಾರದುಅಮ್ಮನುಂಟು ಎಂಬ ಭರವಸೆಯ ಮುಂದೆ ಹೆಣ್ಣು ತಾಯಾಗಲು ಜಗಕೆ ಬಲು ಖುಷಿ ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ ಕಲ್ಲು ದೇವರ ಬಲ್ಲವರಾರಿಲ್ಲಮಾತೃ ದೇವರ ಮುಂದೆ ಮತ್ಯಾರಿಲ್ಲಹಸಿವಿಗಮೃತವಿತ್ತು ಬೆಳೆಸಿದವಳು ತಾಯಿಅವಳ ಪ್ರೀತಿಯ ಮುಂದೆ ಎಲ್ಲವೂ ಸ್ಥಾಯಿಜೀವವಿತ್ತವಳ ಋಣವ ತೀರಿಸಲಾದೀತೆಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ
0549ಎಎಂ22072022 *ಅಮುಭಾವಜೀವಿ ಮುಸ್ಟೂರು*
ಹೇಗೆ ಸಹಿಸಲಿ ತಾಯಿ ನಿನ್ನ ಇಂತಹ ಸ್ಥಿತಿಯಲ್ಲಿ ಕಂಡು ಕರುಣೆಯಿರದ ದೈವವಕ್ಷಮಿಸಲಾರೆ ಎಂದೆಂದಿಗೂ ಕಲ್ಮಶವಿಲ್ಲದ ಮುಗ್ಧ ಜೀವ ಏಕೆ ಸಹಿಸಬೇಕಿಂತ ನೋವಯಾವ ತಪ್ಪಿಗೆ ಇಂತಹ ಶಿಕ್ಷೆಅಸಹಾಯಕನಾದೆಯಾ ಮಾಡಲು ರಕ್ಷೆದಣಿವಿಲ್ಲದೆ ದುಡಿದು ಸಲುಹಿತ್ತುಇಳಿ ವಯಸಲೂ ನೋಯಬೇಕೆಇಂತ ಮೋಸಗೈವ ನಿನಗೇಕೆ ಬೇಕು ನಿತ್ಯ ಪೂಜೆ ಆರತಿ ಅಭಿಷೇಕ ಹೆತ್ತವಳ ಆಪತ್ತಿನಿಂದ ಬಿಡಿಸುಮಕ್ಕಳಿರುವೆವು ಸಲಹಲುಕಲ್ಲು ನೀನು ಅರಿಯಲಾರೆತಾಯಿ ಮಮತೆಯ ವಾತ್ಸಲ್ಯ ಬವಣೆಯ ನೀಗಿಸು ತಪ್ಪು ನಿಲ್ಲಿಸುಅಮ್ಮನೆಂಬ ಜೀವವ ಬದುಕಿಸುಜನ್ಮವಿರುವವರೆಗೆ ಋಣಿಯಾಗಿರುವೆನಮ್ಮ ತಾಯಿಯ ನಮಗೊಪ್ಪಿಸು1120ಪಿಎಂ24072022 *,ಅಮುಭಾವಜೀವಿ ಮುಸ್ಟೂರು*
No comments:
Post a Comment