*ಶ್ರಮಿಕರೆಂಬ ಹೆಸರವರು*
ಶ್ರಮದ ಬದುಕು ಇವರದು
ಶ್ರಮಿಕರೆಂಬ ಹೆಸರವರದು
ಬಿಸಿಲು ಮಳೆ ಎನ್ನದೇ
ಬೆವರು ಸುರಿಸಿ ಉಳುಮೆ ಮಾಡಿ
ದೇಶಕೆಲ್ಲಾ ಅನ್ನ ನೀಡುವ
ರೈತ ಶ್ರಮದ ಮೊದಲ ದಾತ
ಧೂಳು ಹಿಡಿದ ಗಣಿಗಳಲ್ಲಿ
ಭಾರೀ ಯಂತ್ರಗಳ ಜೊತೆಯಲ್ಲಿ
ಹಗಲಿರುಳೆನ್ನದೇ ಶ್ರಮಿಸುವ
ಕಾರ್ಮಿಕ ಶ್ರಮದ ಪ್ರತೀಕ
ಒಂದೆಡೆಯಿಂದ ಮತ್ತೊಂದೆಡೆಗೆ
ಸರಕುಗಳನು ಸಾಗಿಸುತ್ತಾ
ಊಟ ನಿದ್ರೆಗಳಿಲ್ಲದೆ ದುಡಿವ
ಚಾಲಕನದು ಶ್ರಮದ ಕಾಯಕ
ಜಗವೆಲ್ಲ ಮಲಗಿರಲು ತಾನೆದ್ದು
ಎಲ್ಲರ ಸುಖನಿದ್ರೆಯ ಕಾವಲಾಗಿ
ಆಸ್ತಿಪಾಸ್ತಿಯ ಕಾಯುವ
ಆರಕ್ಷಕ ಶ್ರಮದ ಪರಿಪಾಲಕ
ದೇಶದ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಹೊತ್ತು
ಗಿರಿ ಕಣಿವೆ ಕಂದರ ಹಿಮಾಲಯ ತಪ್ಪಲಲಿ
ಜೀವದ ಹಂಗುತೊರೆದು ಹೋರಾಡುವ
ಯೋಧ ಶ್ರಮದ ವಜ್ರಾಯುಧ
ಹಗಲೆಲ್ಲಾ ಮೂಟೆ ಹೊತ್ತು
ಬಿಡಿಗಾಸಿಗೆ ಬೆವರಿಳಿಸಿಕೊಂಡು
ದಣಿವಿಲ್ಲದೆ ಹೆಣಗಾಡುವ
ಕೂಲಿಕಾರ ಶ್ರಮದ ಸರದಾರ
ಮುಂಜಾನೆಯಿಂದ ರಾತ್ರಿ ತನಕ
ಬಿಡುವಿಲ್ಲದೆ ಪಗಾರವನೂ ಕೇಳದೆ
ಮನೆಯ ಕೆಲಸದಲ್ಲಿ ತಲ್ಲೀನವಾದ
ಸ್ತ್ರೀ ಶ್ರಮದ ಬದುಕಿಗೆ ಸಾಕ್ಷಿ
0257ಪಿಎಂ20032017
*ಅಮುಭಾವಜೀವಿ*
No comments:
Post a Comment