Monday, March 20, 2023

ಕವನ

**ಒಂದು ಪುಟ್ಟ ಸಂಸಾರ*

ಮನೆಯ ಮೂಲೆಯಲ್ಲಿ 
ಬಾಗಿಲು ಕಿಟಕಿ ಸಂದಿಯಲ್ಲಿ 
ಇತ್ತು ಒಂದು ಪುಟ್ಟ ಸಂಸಾರ 
ಗುಬ್ಬಚ್ಚಿಯ ದನಿ ಮಧುರ

ಮನೆಯ ಸುತ್ತ ಮುತ್ತ ಹಾರುತ
ಹುಳು ಹುಪ್ಪಟೆ ಕಾಳು ಎಕ್ಕಿ
ಪುರ್ರೆಂದು ಹಾರಿ ಹೋಗಿ ಮತ್ತೆ 
ಬರುವ ಮುದ್ದು ಗುಬ್ಬಿ ಎಲ್ಲಿ ಹೋದೆ

ಪುಟ್ಟ ಕಾಲು ಆಕರ್ಷಕ ಬಣ್ಣ 
ಚಿಕ್ಕ ಕೊಕ್ಕಿನಿಂದ ಚಿಂವ್ಗುಡುತ
ಮನೆ ಒಳಗೆ ಹೊರಗೆಲ್ಲ ಇರುವ
ಗುಬ್ಬಚ್ಚಿ ಎಲ್ಲಿ ಕಣ್ಮರೆಯಾದೆ

ಯಾರಿಗೂ ತೊಂದರೆ ಕೊಡದೆ
ಎಲ್ಲರ ಪ್ರೀತಿಯನ್ನ ಗಳಿಸಿದ್ದೆ
ಮನುಜನ ಆಕ್ರಮಣದಿಂದ
ತತ್ತರಿಸಿ ಎತ್ತ ಹಾರಿ ಹೋದೆ

ಮಕ್ಕಳ ಮುದ್ದಿನ ಗುಬ್ಬಿ ಮರಿ
ಚಿಣ್ಣರ ಕನಸಿನ ಕಿನ್ನರಿ
ಚಿಂವ್ ಚಿಂವ್ ಸದ್ದು ಕೇಳುವ
ಆಸೆಯಾಗಿದೆ ಎಲ್ಲಿರುವೆ ಬರದೆ

ತಂತ್ರಜ್ಞಾನದ ತರಂಗಗಳ ಹಾವಳಿಯಿಂದ 
ನಾನೀಗ ಅಳಿವಿನಂಚಿನಲ್ಲಿರುವೆ
ಅದನು ಬಿಟ್ಟಿರಲಾರಿರಿ ನೀವು
ಅದರಿಂದ ಬದುಕಲಾಗುತಿಲ್ಲ ನಾವು

0859ಎಎಂ20032019
*ಅಮು ಭಾವಜೀವಿ*

*ಗುಬ್ಬಚ್ಚಿ ದಿನದ ಶುಭಾಶಯಗಳೊಂದಿಗೆ*







No comments:

Post a Comment