*ಭಾವಗೀತಾಲಯದಿ*
ಕಟ್ಟೋಣ ಬನ್ನಿ ತಳಿರು ತೋರಣ
ಬೀರೋಣ ಭಾವದ ಹೊಂಗಿರಣ //ಪ//
ಆಷಾಢದ ಈ ತಂಗಾಳಿಯಂತೆ
ಮುಂಜಾನೆ ಕೂಗೋ ಮುಂಗೋಳಿಯಂತೆ
ಮನದ ಮಂಜಿನ ಹನಿ ಸೇರಿಸಿ
ಭಾವಗೀತಾಲಯವ ಸಿಂಗರಿಸಿ
ಹಾಡೋಣ ಬನ್ನಿ ನಲಿಯೋಣ ಬನ್ನಿ /೧/
ವರ್ಷಕಾಲದ ಹರ್ಷವನೆಲ್ಲ ಸವಿದು
ಭಾವಗೀತೆಯ ಪದಪದಗಳಲಿ ಬೆಸೆದು
ಹಾಡೋ ಹಕ್ಕಿಯ ಕೊರಳಾಗಿ
ಬೆಳೆಯೋ ಬಳ್ಳಿಗೆ ಬೆರಳಾಗಿ
ಬೆಳೆಯೋಣ ಬನ್ನಿ ಬೆಳೆಸೋಣ ಬನ್ನಿ /೨/
ಋತುಗಳ ಮೆರವಣಿಗೆಯಲ್ಲಿ
ಸಂಭ್ರಮಿಸುತ್ತಾ ಬರವಣಿಗೆಯಲ್ಲಿ
ಭಾವಲೋಕಕೆ ಬಣ್ಣ ಬಳಿದು
ಭಾವಗೀತಾಲಯದಿ ಉಳಿದು
ಚೆಲುವ ಬಿತ್ತೋಣ ಬನ್ನಿ ಒಲವ ಪಡೆಯೋಣ ಬನ್ನಿ /೩/
೦೩೨೫ಎಎಂ೦೧೦೭೨೦೧೭
*ಅಮುಭಾವಜೀವಿ*
No comments:
Post a Comment