ಬಡತನದಲ್ಲಿ ನೋವು ಸಹಜ
ಪ್ರೀತಿಯಲಿ ಮರೆಯಬೇಕು ಮನುಜ
ಪ್ರೇಮ ಪೂಜೆಗೆ ಆಡಂಬರ ಬೇಕಿಲ್ಲ
ಅರಿತ ಮನಸುಗಳಿದ್ದರಷ್ಟೆ ಸಾಕಲ್ಲ
ಹಣದಿ ಬಡತನವಿದ್ದರೇನು ಪ್ರಿಯೆ
ಪ್ರೀತಿಗೆಲ್ಲಿದೆ ಬಡತನ ತಿಳಿಯೆ
ನಿನಗೆ ನಾನು ನನಗೆ ನೀನು
ಇಷ್ಟೇ ಸಾಕು ಒಲವ ಹಾದಿಯಲಿ
ಗಂಜಿ ಕುಡಿದರೂ ಖುಷಿಯಿದೆ
ಪ್ರೀತಿಯ ಈ ಪಯಣದಲಿ
ಅಂಜಿ ನಡೆಯುವೆ ಏಕೆ
ಪ್ರೀತಿಸಲು ಧೈರ್ಯ ಬೇಕಿಲ್ಲಿ
ಗುಡಿಸಲೇ ಇರಲಿ ನಾವಿರಲು
ಒಬ್ಬರಿಗೊಬ್ಬರು ತಬ್ಬಿ ಹಿಡಿದರೆ
ಅರಮನೆಯಲೂ ಸಿಗದ ಆನಂದವಿದೆ
ಆತ್ಮೀಯ ಹೃದಯಗಳ ಪಿಸುಮಾತಲಿ
ಕೈತುತ್ತು ಕೊಟ್ಟು ಕೈಹಿಡಿದು ನಡೆಸು
ಕಡೆವರೆಗೂ ಜೊತೆಯಿರುವೆ
ಕಷ್ಟಗಳ ಸರಮಾಲೆ ಎದುರಾಗಲಿ
ಪ್ರೀತಿಯ ಅನುಬಂಧ ಗಟ್ಟಿಯಾಗಿರಲಿ
೧೦೨೨ಪಿಎಂ೦೩೦೩೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment