Monday, March 6, 2023

ತನಗ


*ತನಗ*
ಸ್ವರ್ಗ ಸಮಾನವದು
ಪ್ರೀತಿ ಪಾತ್ರರ ಸಂಗ
ದೈವ ಸಾಕ್ಷಾತ್ಕಾರವು
ಶುದ್ಧದಿ ಅಂತರಂಗ

ನೋಡುವ ನೋಟದೊಳು
ದೋಷವಿರದಿರಲು
ಕ್ಲೇಶ ಕಳೆಯುವುದು
ಸಂತಸ ದೊರೆವುದು

ದೈವ ನಿರ್ಣಯವನು
ಮೀರಲಾಗದೆಂದಿಗೂ
ನಡೆವ ಹಾದಿಯಲಿ
ನಂಬಿಕೆಯೊಂದಿರಲಿ

ಎತ್ತರದ ವ್ಯಕ್ತಿತ್ವ
ತರುವುದು ದೈವತ್ವ
ಎಡವದಂತೆ ನಡೆ
ಕಷ್ಟ ಸುಖ ಸಮತ್ವ

ನಿಂದಕರಿರುವರು
ಆನೆಯ ಕಂಡು ಶ್ವಾನ
ಬೊಗಳುವಂತೆ ಜನ
ನಿತ್ಯ ನಿನ್ನ ಪಾಲಿಗೆ

ದುರ್ಜನ ಸಂಘವದು
ಕೆಸರಿನ ಸಂಬಂಧ
ಸಜ್ಜನರ ಸಂಗವದು
ಚಂದನದ ಸೌಗಂಧ

ಸಕಲರ ಪ್ರೀತಿಸು
ಸುಖಕರ ಜೀವಿಸು
ತಾಳ್ಮೆಯಿಂದ ಸಹಿಸು
ಶರಣಾಗಿ ಸಾಧಿಸು 

೦೨೨೭ಎಎಂ೦೭೦೩೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment