ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಗದೆಲ್ಲಾ ಮಹಿಳಾ ಸಮುದಾಯಕ್ಕೆ ಶುಭಕೋರುತ್ತಾ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹರಿಯ ಬಿಡುತ್ತಿದ್ದೇನೆ.
ಹೆಣ್ಣು ಈ ಸೃಷ್ಟಿಯ ಅದ್ಬುತ ರೂಪಕ.ಅವಳು ಸಹನೆಯಲ್ಲಿ,ತ್ಯಾಗದಲ್ಲಿ,ಹಿಡಿದ ಕಾರ್ಯ ಸಾಧನೆಯಲ್ಲಿ
ಗಂಡಿಗಿಂತಲೂ ಅಚಲವಾಗಿದ್ದು ಗುರಿ ಮುಟ್ಟುವ ಛಾತಿಯಿರುವುದು ಅವಳೊಬ್ಬಳಿಗೆ ಮಾತ್ರ.ಹೆಣ್ಣು ಬಾಳಿನ ಅಷ್ಟೂ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದವಳಾಗಿದ್ದಾಳೆ.ಅವಳ ಕೈಯಲ್ಲಿ ಆಡಿ ಬೆಳೆದ ನಾವೇ ಧನ್ಯರು.
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬೊಂದು ಮಾತಿದೆ.ಅಂದರೆ ಹೆಣ್ಣು ತಾಯಾಗಿ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಷ್ಟೇ ಸಲೀಸಾಗಿ ತನ್ನ ಸಮಾಜದ ಏಳಿಗೆಗಾಗಿ ಚಾಣಾಕ್ಷತೆಯ ಮೆರೆದು ಅಲ್ಲೂ ತಾನು ಪ್ರಬುದ್ದಳು ಎಂಬುದನ್ನು ಸಾಭೀತುಪಡಿಸಿದ್ದಾಳೆ.ಇತಿಹಾಸದ ಪುಟವನೊಮ್ಮೆ ತಿರುವಿ ನೋಡಿದಾಗ ಅವಳ ಮಹತ್ವ ನಮಗೆ ಅರಿವಾಗುತ್ತದೆ.
ಹೆಣ್ಣು ಇಷ್ಟೆಲ್ಲಾ ಹೊಂದಿದ್ದರೂ ನಮ್ಮ ಸಮಾಜ ಅವಳನ್ನಿನ್ನು ಅಬಲೆಯನ್ನಾಗಿಯೇ ನೋಡುತ್ತಿದೆ.ಎಲ್ಲಿ ನಾರಿಯನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಶಾಸ್ತ್ರಗಳು ಹೇಳಿದರೂ ಇಂದಿನ ಆಧುನಿಕ ಯುಗದಲ್ಲಿ ಅವಳ ಹೆಜ್ಜೆಹೆಜ್ಜೆಗೂ ಸಂಕಷ್ಟಗಳನ್ನ ಎದುರಿಸುತ್ತಿದ್ದಾಳೆ.ಈ ಪುರುಷ ಪ್ರಧಾನ ಸಮಾಜದಲ್ಲಿ ಅವಳು ಸಂಭಾವನೆ ಕೇಳದ ದುಡಿವ ನಿಸ್ವಾರ್ಥಿಯಾದರೂ, ಅವಳನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.ಅವಳು ತಾಯಗರ್ಭದಿಂದಲೇ ತನ್ನ ಉಳಿವಿಗಾಗಿ ಹೋರಾಡುತ್ತಾ ಬಂದು ಈ ಗಂಡೆಂಬ ಭಂಡನ ಏಳಿಗೆಗೆ ಸರ್ವಸ್ವವನೇ ತ್ಯಾಗ ಮಾಡಿದರೂ ವರದಕ್ಷಿಣೆ,ಅತ್ಯಾಚಾರಗಳಂತಹ ಅಡಕೊತ್ತಿಗೆ ಸಿಲುಕಿ ನರಳುವಂತಾಗಿರುವು ವಿಪರ್ಯಾಸ.
ಕೊನೆಯದಾಗಿ ಈ ಜಗತ್ತನ್ನೇ ಸೃಷ್ಟಿಸಬಲ್ಲ ತಾಯಕುಲಕೆ ನನ್ನ ಪ್ರಣಾಮವನ್ನರ್ಪಿಸುತ್ತಾ ಇನ್ನು ಮುಂದಾದರೂ ಸಮಾಜದ ಎಲ್ಲಾ ಕಡೆಗಳಲ್ಲಿ ಅವಳು ಹೆಣ್ಣು ಎಂಬ ಮಾತ್ರಕ್ಕೆ ಸೀಮಿತ ಮಾಡದೆ ಸಮಾನ ಅವಕಾಶವನಿತ್ತು ಅಷ್ಟೇ ಗೌರವಾನ್ವಿತವಾಗಿ ಬದುಕಲು ಅನುವು ಮಾಡಿಕೊಟ್ಟರೆ ಅದೇ ನಾವವಳಿಗೆ ತೀರಿಸುವ ಋಣ.
ಮತ್ತೊಮ್ಮೆ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯಗಳು.
{529ಎಎಂ080315}
No comments:
Post a Comment