*ಶಾಂತವಾಗಿ ಮೇಘವೇ*
ಓ ಮೇಘಗಳೆ ಇದು ನ್ಯಾಯವೇ
ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ
ಅನಾವೃಷ್ಟಿ ಇದು ಸರಿಯೇ
ಕೊಡಗನ್ನೇ ಮಡುವಾಗಿಸಿ
ಬದುಕನ್ನೇ ನುಂಗಿಹಾಕಿ
ಪ್ರವಹಿಸಿದೆ ಘೋರ ಪ್ರವಾಹ
ಬೆಟ್ಟ ಗುಡ್ಡಗಳೆಲ್ಲ ಕುಸಿದು
ಬದುಕಿನ ನೆಮ್ಮದಿಯ ಕಸಿದು
ಬೀದಿಗೆ ತಂದ ನಿನ್ನದೆಂತ ದಾಹ
ಬಯಲು ಸೀಮೆಯ ಮರೆತು
ಅಲ್ಲೇ ನೀವು ನೆಲೆ ನಿಂತು
ಶಿಕ್ಷಿಸೋ ಕಾರಣವೇನು
ಜಲದಿಗ್ಬಂಧನ ವಿಧಿಸಿ
ಹೊಲಗದ್ದೆಗಳ ಮುಳುಗಿಸಿ
ಗೆದ್ದು ಬೀಗುವೆ ನೀನು
ಮುನಿಯದಿರು ಮೇಘವೆ
ಬದುಕಲು ಬಿಡು ನಮ್ಮನು
ಮನ್ನಿಸಿ ನಮ್ಮ ತಪ್ಪನು
ಸಾವನ್ನೇ ಕಣ್ಣ ಮುಂದಿರಿಸಿ
ಎಚ್ಚರಿಕೆಯ ನೀ ನೀಡಿದೆ
ಕನಿಕರಿಸಿ ರಕ್ಷಿಸು ನಮ್ಮನು
ತೃಣ ಜೀವವು ನಮ್ಮದು
ಹೆಣಗಾಡುತಲಿಹುದು
ಶಾಂತವಾಗೆಂದು ಬೇಡುತ
0627ಪಿಎಂ20082018
ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment