Tuesday, March 30, 2021

#ಅಮುಭಾವಬುತ್ತಿ

*ಅನುಭವದಬುತ್ತಿ*

ಬದುಕಿನಲ್ಲಿ  ಬರುವ ಸಂಕಷ್ಟಗಳು 
ಅನುಭವದ ಬುತ್ತಿ ಕಟ್ಟುವ ಕುಲುಮೆಗಳು 
ಅಂಜದೆ ಮುನ್ನುಗ್ಗಬೇಕು 
ಸೋಲುವ ಭೀತಿ ಬಿಡಬೇಕು 
ಆತ್ಮವಿಶ್ವಾಸದ ಹೆಜ್ಜೆಯನೀಡಬೇಕು 
ತಾಳ್ಮೆಯಿಂದ ದಡ ಸೇರಬೇಕು 
ಭರವಸೆಯೊಂದೆ ಹಾದಿ ಸ್ಪೂರ್ತಿ 
ಜೀವನದ ಗುರಿ ತಲುಪಲು 

1040ಎಎಂ13092020
*ಅಮುಭಾವಜೀವಿ ಮುಸ್ಟೂರು*


ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುಬೇಕು


ಹಿಂತಿರುಗಿ ನೀ ನೋಡಲು
ವಶವಾಗಿ ಹೋದೆ ಆ ಕ್ಷಣ 
ನಿನ್ನ ಮೊಗದ ಆ ಆಹ್ವಾನಕ್ಕೆ
ಮರುಮಾತಿಲ್ಲದೆ ಆಗಮಿಸಿದೆ
ನಿನ್ನ ಕಣ್ಣ ಈ ಪ್ರೀತಿಯ ಭಾವ
ಸೆಳೆಯಿತು ನನ್ನನ್ನು ಬಳಿಗೆ 
ನಿನ್ನ ಮುಂಗುರುಳ ಸ್ವಾಗತ 
ತೋರಿತು ಮನದ ಇಂಗಿತ
ಒಲವಿನ ಈ ಮಿಲನ 
ಜನುಮಗಳ ಬಂಧನ

1153ಎಎಂ13092020
ಅಮುಭಾವಜೀವಿ ಮುಸ್ಟೂರು 


ಪ್ರೀತಿಯ ನಾಟಕವಾಡಿ
ಹೃದಯದಿಂದ ಆಚೆದೂಡಿ
ಖುಷಿ ಪಡುವೆಯಾ ನೋವ ನೀಡಿ
ಏಕೆ ಹೀಗೆ ಮಾಡಿದೆ ನೀನು 
ಮೋಸ ಮಾಡಲು ಕಾರಣವೇನು
ಅವಮಾನಿಸಿದೆ ಅನುಮಾನಿಸಿ
ದೂರ ತಳ್ಳಿದೆ ನೀ ನನ್ನ ಆಪಾದಿಸಿ
ಚೆಲ್ಲಾಟದ ಚತುರ ನೀನು 
ಮೌನದಿ ಸಹಿಕೊಳ್ಳುವೆ ನಾನು 
ಎಂದಿಗೂ ಮರೆಯಲಾರೆ ನಿನ್ನನು
ನೀ ಕೊಟ್ಟ ಎಲ್ಲಾ ನೋವನು

0613ಪಿಎಂ13092020
*ಅಮುಭಾವಜೀವಿ ಮುಸ್ಟೂರು*

No comments:

Post a Comment