Sunday, March 28, 2021

ಕವನ

*ಚಂದಿರ ನೀರಿಗೆ ಹೋಗುವ ಬಾರೆ*

ಈ ಸಂಜೆಯ ತಂಗಾಳಿಯಂತೆ 
ರಂಗೇರಿದ ಗೋಧೂಳಿಯಂತೆ
ನಿನ್ನೊಲವ ಗುಂಗಿನಲ್ಲಿ ಮೈಮರೆವೆ
ಹಸಿರು ಪೈರು ನಲಿಯುವಂತೆ 
ಮೊಗ್ಗು ಬಿರಿದು ಹರಡುವಂತೆ 
ನಿನ್ನ ಪ್ರೇಮಕ್ಕೆ ನಾ ಸೋತಿರುವೆ 

ಹರಿಯೋ ನೀರಿನ ಲವಲವಿಕೆ 
ಹಕ್ಕಿ ಕೊರಳ ಇಂಪು ಗಾನಕ್ಕೆ 
ನಿನ್ನ ಚಿನಕುರಳಿ ಮಾತೇ ಹೋಲಿಕೆ 
ಸಾಗರದ ಹೆದ್ದೆರೆಗಳಲ್ಲಿ ತೇಲಿ
ಬೆಟ್ಟಗಳ ಸವರಿ ಓಡುವ ಮೇಘಗಳ 
ಚಿತ್ತಾರದ ಭಿತ್ತಿಗಳಲ್ಲಿ ನಿನ್ನದೇ ಕನವರಿಕೆ 

ಯಾರೇ ನೀನು ಮನದರಸಿ ಏನು 
ನಿನ್ನ ಸ್ಪರ್ಶ ಒಂದು ರೋಮಾಂಚನ 
ಆ ಸ್ಫೂರ್ತಿಯಲ್ಲಿ ಹುಟ್ಟಿತು ಕವನ
ಚಂದಿರನೂರಿಗೆ ಹೋಗುವ ಬಾರೆ 
ತಾರೆಗಳ ಜೊತೆ ಸೇರುವ ಬಾರೆ 
ಸ್ವರ್ಗಮಯ ನಮ್ಮೀ ಜೀವನ 

೦೫೫೫ಪಿಎಂ೦೯೦೮೨೦೨೦
*ಅಮುಭಾವಜೀವಿ ಮುಸ್ಟೂರು*

No comments:

Post a Comment