*ಬಾಳಪಯಣದ ತುಂಬಾ*
ನೀ ನನ್ನ ಜೊತೆಗಿರಲು
ನನಗಿಲ್ಲ ಯಾವ ದಿಗಿಲು
ಬಾಳಪಯಣದ ತುಂಬಾ
ನಿನ್ನ ನೆನಪುಗಳ ಬಿಂಬ
ಹೆಜ್ಜೆ ಹೆಜ್ಜೆಗೂ ಇರಲಿ ನಿನ್ನ ಬೆಂಬಲ
ಇದುವೇ ನನ್ನ ನಿಸ್ವಾರ್ಥ ಹಂಬಲ
ಪ್ರೀತಿಯ ಸೆಳೆತ ತಂದ
ನಮ್ಮೀರ್ವರ ಅನುಬಂಧ
ಶಶಿ ತಾರೆಯರ ಆದರ್ಶ
ನಮ್ಮಲ್ಲಿ ಬೇಡ ಸಂಘರ್ಷ
ಕಷ್ಟಗಳ ಎದುರಿಸಿ ಮುನ್ನಡೆಯೋಣ
ಇಷ್ಟದ ಬಾಳಲ್ಲಿ ಖುಷಿಯಾಗಿರೋಣ
ನಮಗೇಕೆ ನಲ್ಲೇ ಜಗದ ಜಂಜಾಟ
ನಾವೇ ತೆರೆಯೋಣ ಹೊಸ ಸಂಪುಟ
ಅಲ್ಲಿ ನಿನಗೆ ನಾನು ನನಗೆ ನೀನು
ನಮಗೆ ಸ್ಫೂರ್ತಿಯಾಗಲಿ ಬುವಿ ಭಾನು
ಕೈ ಕೈ ಹಿಡಿದು ಮುಂದೆ ಸಾಗೋಣ
ಬಾಳ ಪಥದಲಿ ಪರಿಭ್ರಮಿಸೋಣ
೦೭೨೬ಎಎಂ೦೧೧೨೨೦೨೦
*ಅಪ್ಪಾಜಿ ಎ ಮುಷ್ಟೂರು*
ಮಂಜು ಮುಸುಕಿದ ಮುಂಜಾನೆಯಲಿ
ಮೈ ತೊಳೆದ ಎಲೆಗಳ ಖುಷಿಯಲ್ಲಿ
ಈ ಶುಭೋದಯವ ಸಂಭ್ರಮಿಸೋಣ
ಜಗದ ಚೆಲುವಿಗೆ ನಮನ ಸಲ್ಲಿಸೋಣ
ಬಿರಿದ ಮೊಗ್ಗಿಗೆ ರವಿಕಿರಣದ ಸ್ಪರ್ಶ
ಎಷ್ಟೊಂದು ಆಹ್ಲಾದ ಈ ಸನ್ನಿವೇಶ
ನಿಸರ್ಗದ ಮನೆಯೇ ಸ್ವರ್ಗ
ಎಷ್ಟು ಉಪಯುಕ್ತ ಅದು ನೀಡಿದ ಸಂದೇಶ
ಒಟ್ಟಿಗೆ ಬಾಳುವ ನಿಸರ್ಗ ಪಾಠ
ತೆರೆದಿದೆ ಈಗ ನವ ಸಂಪುಟ
*ಭ್ರಮೆ ಕಳಚಿದಾಗ*
ಇಷ್ಟು ದಿನದ ಬಂಧ
ಕೊನೆಗೊಂಡಿತು ಇಂದಿಗೆ
ಸ್ನೇಹದಲ್ಲಿ ಸಲಿಗೆ ಬಯಸಿ
ಸಲಿಗೆಯಿಂದ ಪ್ರೀತಿ ಉದಿಸಿ
ಈರ್ವರೊಂದಾಗುವ ಮೊದಲೇ
ವಿರಸ ತಾನು ಅರಸಿ ಬಂದು
ದೂರವಾದವು ಜೀವಗಳಿಂದು
ಶುದ್ಧ ಸಂಬಂಧ ಕಡಿದುಕೊಂಡು
ಒಂದು ಜೀವ ನೊಂದಿದೆ
ಇನ್ನೊಂದು ಜೀವ ಖುಷಿಗೊಂಡಿದೆ
ಭ್ರಮೆಯ ಬದುಕು ಕಳಚಿದಾಗ
೦೨೫೪ಪಿಎಂ೦೧೧೨೨೦೨೦
ಅಪ್ಪಾಜಿ ಎ ಮುಷ್ಟೂರು
*ಅವಳ ನೆನಪು*
ಅವಳ ನೆನಪುಗಳು
ಮತ್ತೆ ಮತ್ತೆ ಕಾಡಿವೆ
ಅವಳ ಸಲಿಗೆಯ ಮಾತುಗಳು
ಹೃದಯದಿ ಗಾಯ ಮಾಡಿವೆ
ಅವಳ ಅಗಲಿಕೆಯ ನೋವು
ಒಂಟಿಯಾಗಿಸುತಿದೆ
ಅವಳ ಪ್ರೀತಿಯ ಮುಲಾಮು
ಬೇಕೆಂದು ಮನ ಬಯಸಿದೆ
1253ಪಿಎಂ02122020
*ಅಪ್ಪಾಜಿ ಎ ಮುಸ್ಟೂರು*
*ಕಷ್ಟ ಬಂದಾಗ*
ಕಷ್ಟ ಬಂದಾಗಲೇ ತಿಳಿಯುವುದು
ಜೊತೆಯಲ್ಲಿ ನಿಲ್ಲುವವರಾರೆಂದು
ಹಣ ಅಂತಸ್ತು ಇದ್ದರೇನೇ ಇಲ್ಲಿ
ನೆಂಟರು ಬಂಧುಬಳಗ ಎಲ್ಲಾ
ಬರಿಯಾದೆಯೋ ಎಲ್ಲಾ ದೂರ ದೂರ
ಮತ್ತೆ ಮೇಲೊಂದಿಷ್ಟು ನಿಷ್ಠುರ
ಸ್ವಾಭಿಮಾನಕೂ ಅವಮಾನ ಮಾಡಿ
ಕತ್ತು ಹಿಸುಕುವ ಸಂಬಂಧಿಕರೇ ಹೆಚ್ಚು
ಹುಚ್ಚು ಭ್ರಮೆಯಾಚೆ ಬಂದು
ಬದುಕಬೇಕು ಈ ಜೀವನ ನಮ್ಮದು
ಕಷ್ಟವೋ ಸುಖವೋ ಜಯಿಸುವ ತನಕ
ಬೆಲೆಯಿಲ್ಲ ನೆಲೆಯಿಲ್ಲ ಮೂಲೆಗುಂಪು
0920ಪಿಎಂ02122020
*ಅಪ್ಪಾಜಿ ಎ ಮುಸ್ಟೂರು*
*ನಿಗಗಾಗಿ*
ನಿನಗಾಗಿ ಹಂಬಲಿಸೋ
ಈ ಹೃದಯವ ನೋಯಿಸಿದೆ
ನಿನ್ನ ಪ್ರೀತಿಯ ಬಯಸೋ
ಮನಕೆ ನಿನ್ನಾಸರೆ ಬೇಕಿದೆ
ದೂರುವ ಬದಲು ನೀ
ಸನಿಹದಲ್ಲಿ ಬಂದು ಕೂರು
ದ್ವೇಷಿಸುವ ಬದಲು
ಸ್ನೇಹದಿ ಬಂದು ಸೇರು
ಬೇಕಿಲ್ಲ ಅವಮಾನ
ತೋರು ಒಂದಿಷ್ಟು ಅಭಿಮಾನ
0154ಪಿಎಂ03122020
*ಅಪ್ಪಾಜಿ ಎ ಮುಸ್ಟೂರು*
*ಹೀಗೆ ಬದುಕು*
ಮಾತಿನಲ್ಲಿ ತೂಕವಿರಲಿ
ಮನಸಿನಲ್ಲಿ ಪ್ರೀತಿಯಿರಲಿ
ಹೃದಯದಲ್ಲಿ ಸ್ನೇಹವಿರಲಿ
ಬದುಕಿನಲ್ಲಿ ವಿಶ್ವಾಸವಿರಲಿ
ಅನುಮಾನ ಅವಮಾನ ಮಾಡಿ
ಎಲ್ಲವನ್ನೂ ಕಳೆದುಕೊಂಡು
ಒಬ್ಬಂಟಿಯಾಗಿ ನಿಲ್ಲದಿರು
ಯಾರ ಮೇಲೂ ದ್ವೇಷ ಬೇಡ
ಯಾರ ಮುಂದೆಯೂ ಕೈಚಾಚಬೇಡ
ಯಾರ ಮರ್ಜಿಗಾಗಿ ಕಾಯಬೇಡ
ಸಂಬಂಧ ಬೆಸೆವ ದರ್ಜಿಯಾಗು
0918ಪಿಎಂ03122020
*ಅಪ್ಪಾಜಿ ಎ ಮುಸ್ಟೂರು*
*ಮೋಸಗಾತಿ*
ಮನವ ಘಾಸಿಗೊಳಿಸಿದಳು
ಆ ಮಹಾ ಮಾಯಗಾತಿ
ಹೃದಯವ ಗಾಯಗೊಳಿಸಿದಳು
ಆ ಮಹಾ ಮೋಸಗಾತಿ
ಸ್ನೇಹ ಬಯಸಿ ಬಂದಳು
ಅದನು ಕೊಟ್ಟೆ ಧಾರಾಳವಾಗಿ
ಪ್ರೀತಿ ಬೇಕು ಅಂದಳು
ನಿರಾಕರಿಸಿದೆ ಅತಿ ವಿನಯವಾಗಿ
ಸ್ನೇಹ ಪ್ರೀತಿ ಎರಡನೂ ತೊರೆದು
ಹೋದಳು ಇಂದು ಮಹಾ ವಂಚಕಿಯಾಗಿ
0546ಎಎಂ04122020
*ಅಮುಭಾವಜೀವಿ ಮುಸ್ಟೂರು*
*ಬೇಡವಾದಾಗ*
ಬೇಡವಾದಾಗ ನಿರ್ಬಂಧ
ಹೇರುವೆ ನೀನು
ಬೇಕಾದಾಗ ಸಂಬಂಧ
ಬಯಸಿ ಬರುವೆ ನೀನು
ಅರಿಯಲಾರೆ ನಿನ್ನ ಮನದ
ಒಳ ತಿರುಳನ್ನು
ಮರೆಯಲಾರೆ ಎಂದೆಂದಿಗೂ
ನೀ ಕಲಿಸಿಹೋದ ಪಾಠವನ್ನು
ಮಾಯಾಂಗನೆ ನಿನ್ನ
ಮೋಸದಾಟದಿ ದಾಳವಾಗಿ
ಆಡಿಸಿದೆ ಆಟವ(ನ)ನ್ನ
ನೀ ಮಾಡಿದ ಗಾಯಕೆ
ಮುಲಾಮಿಲ್ಲ ಸಹಿಸುವೆ ನಾವು
ನೀ ಮೋಹ(ಸ)ದ ಪ್ರತಿರೂಪವು
0954ಪಿಎಂ04122020
*ಅಪ್ಪಾಜಿ ಎ ಮುಸ್ಟೂರು*
*ಅಮ್ಮ ನೀನೇ ಕಾರಣ*
ನನ್ನ ನಗುವಿಗೂ ಅಳುವಿಗೂ
ಅಮ್ಮ ನೀನೇ ಕಾರಣ
ನೀ ಕೊಟ್ಟ ಈ ಜೀವದ
ಚೈತನ್ಯವೂ ನೀನೇನೆ
ನಿನ್ನೊಡಲ ಗರ್ಭದಲ್ಲಿ
ಜಾಗವಿತ್ತ ಋಣಕಾಗಿ
ಜನುಮ ಜನುಮದ
ತನಕ ನಿನ್ನ ನಾ ಪೂಜಿಸುವೆ
0208ಪಿಎಂ05122020
*ಅಪ್ಪಾಜಿ ಎ ಮುಸ್ಟೂರು*
#ಅಮುಭಾವಬುತ್ತಿ ೨೨೮
*ಹಾಯ್ಕು*
ತೀರದ ಲೋಭ
ಲಾಭವಿಲ್ಲದ ನಾಕ
ಕಷ್ಟ ಜೀವನ
1035ಪಿಎಂ05122020
*ಹಾಯ್ಕು*
ಜೀವನ ನಾಣ್ಯ
ಮೊಗಚಿ ಬೀಳುವಾಗ
ಸುಖದುಃಖವು
1045ಪಿಎಂ05122020
*ಅಮುಭಾವಜೀವಿ
*ಅಮುಭಾವಜೀವಿ *
*ಹಾಯ್ಕು*
ಅರಿತ ಬಾಳ್ವೆ
ಬಾಳೆಲೆ ಊಟದಂತೆ
ಸವಿರುಚಿಯು
1054ಪಿಎಂ05122020
*ಅಪ್ಪಾಜಿ ಎ ಮುಸ್ಟೂರು*
*ಹಾಯ್ಕು*
ಮಗು ಮನಸ್ಸು
ಮೃದು ಸುಮ ದಳವು
ಮುಳ್ಳಾಗದಿರು
1101ಪಿಎಂ05122020
*ಅಪ್ಪಾಜಿ ಎ ಮುಸ್ಟೂರು*
*ದಾಂಪತ್ಯ*
ಒಲವಿನ ಆರಾಧನೆಗೆ
ಚೆಲುವಿನ ಈ ಬೆಸುಗೆ
ನೋಡುವ ಕಣ್ಣಿಗಿಂತ
ಮಿಡಿವ ಹೃದಯವೇ ಹಿತ
ಮಾತು ಮೌನವಾಗಿ
ಸೋತು ಶರಣಾಗಿ
ಬಾಳ ಹಾದಿಯಲಿ
ಜೊತೆ ನಡೆವುದೇ
ದಾಂಪತ್ಯದನುಸಂಧಾನ
0323ಎಎಂ06122020
*ಅಪ್ಪಾಜಿ ಎ ಮುಸ್ಟೂರು*
*ಸಾರ್ಥಕತೆ*
ಹೆಜ್ಜೆ ಹೆಜ್ಜೆಗೂ ಗಮನಿಸುವ
ವಿದ್ವತ್ಜನರ ತಿದ್ದುವ ಮಾತುಗಳು
ಬೆಳೆಯುವ ಉತ್ಸಾಹಿಗೆ
ಸ್ಪೂರ್ತಿಯ ಚಿಲುಮೆಗಳು
ತುಳಿದ ಮುಳ್ಳಿನ ನೋವು
ಭಾವದೊಳಗುಟ್ಟಿದ ಪದವು
ಓದುವೆದೆಗೆ ಹಿತ ತರಲು
ಸಾರ್ಥಕ್ಯದ ಹೊನಲು
0334ಎಎಂ06122020
*ಅಪ್ಪಾಜಿ ಎ ಮುಸ್ಟೂರು*
ನೀ ಹೀಗೆ
ತಿರುಗಿ ನೋಡುವ ಪರಿಗೆ
ಕರಗಿ ಹೋದೆ ಮಂಜಿನಂತೆ
ಆ ನಗುವ ಕಂಡು
ಮನದಿ ಪುಳಕಗೊಂಡು
ಅರಳಿದೆ ನೀ ಹಿಡಿದ ಸುಮದಂತೆ
0358ಎಎಂ06122020
*ಅಪ್ಪಾಜಿ ಎ ಮುಸ್ಟೂರು*
*ಬೆಳಕು*
ಭರವಸೆಯ ಬೆಳಕು
ಕತ್ತಲಲ್ಲಿರುವವಗೆ
ಅದೇ ಬೆಳಕು ಸಾವು
ತರುವುದು ಪತಂಗಕೆ
ಬೆಳಕದು ಒಂದೇ ಆದರೂ
ಬಳಕೆಯಲಿ ಒಳಿತು ಕೆಡುಕು
0629ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*
ಆಡುವ ಮಾತು
ವ್ಯಕ್ತಿತ್ವ ಸೂಚಕ
ನೋಡುವ ನೋಟ
ಭಾವ ಪ್ರಚೋದಕ
ಮಾತು ಭಾವಗಳ
ಸಮ್ಮಿಳಿತ ನಡತೆ
ನಡೆ ನುಡಿ ಒಂದಾದರೆ
ಅದುವೇ ಬಾಳ ಘನತೆ
0913ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*
*ಒಲವಾಗಿದೆ*
ನೀ ಹಿಡಿದ ಸುಮದ
ಚೆಲುವಿಗೆ ಪೈಪೋಟಿ
ಶುರುವಾಗಿದೆ ಈಗ
ನಿನ್ನ ವದನದ
ಕಾಂತಿಯ ಕಂಡು
ಸುಮವೂ ನಾಚಿ ಕೆಂಪಾಗಿದೆ
ಈ ಮುಂಗುರುಳ ವಿನ್ಯಾಸ
ನೋಡಲೇನೋ ವಿಶೇಷ
ನಿನ್ನೊಳಗೀಗ ಒಲವಾಗಿದೆ
1003ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*
ಹಾಯ್ಕು
ಪ್ರೀತಿಯಂಕುರ
ಹರೆಯ ಉಡುಗೊರೆ
ಬಾಳ ಹಾದಿಲಿ
ಕಂಡ ಕನಸು
ನನಸಾಗುವ ಮುನ್ನ
ನಿರಾಸೆ ದಾಳಿ
ಮನುಜ ಪಥ
ಪ್ರೀತಿಯ ರಥದಲಿ
ರಾರಾಜಿಸಲಿ
1259ಪಿಎಂ07122020
*ಅಪ್ಪಾಜಿ ಎ ಮುಸ್ಟೂರು*
#ಅಮುಭಾವಬುತ್ತಿ ೨೩೯
*ಹಾಯ್ಕು*
ನಿನ್ನ ಸಲುಗೆ
ಬದುಕ ಕಲಿಸಿತು
ಬಾಳ ಹಾದಿಲಿ
*ಅಪ್ಪಾಜಿ ಎ ಮುಸ್ಟೂರು*
#ಅಮುಭಾವಬುತ್ತಿ೨೪೦
*ನಂಬಿಕೆ ಒಡೆದರೆ*
ನಂಬಿಕೆಯ ಗಾಜು ಒಡೆದರೆ
ಜೋಡಿಸಲಾಗದು ಮೊದಲಿನಂತೆ
ನೋಡುವ ನೋಟ ಬದಲಾಗಿ
ಎಲ್ಲದರಲ್ಲೂ ತಪ್ಪು ಹುಡುಕಿ
ಅನುಬಂಧ ಮರೆಯಾಗಿ
ಅವಲಂಬನೆ ದೂರವಾಗಿ
ಪರಸ್ಪರ ದೂರುತ
ನೆಮ್ಮದಿಯ ಹಾಳುಗೈದು
ನೊಂದು ಬೆಂದು ಬಸವಳಿವುದು
0338ಪಿಎಂ08122020
*ಅಪ್ಪಾಜಿ ಎ ಮುಸ್ಟೂರು*
*ಹಾಯ್ಕು*
ಸುಖ ಎಲ್ಲಿದೆ
ಪ್ರೀತಿಯಿಲ್ಲದ ಬಾಳು
ನಂಬಿಕೆ ಇಲ್ಲ
08122020
*ಅಪ್ಪಾಜಿ ಎ ಮುಸ್ಟೂರು*
*ಕೌತುಕ*
ನಿನ್ನ ತಿಳಿಯುವ ಕುತೂಹಲ
ತಿಳಿದಷ್ಟು ನೀ ಕೌತುಕ
ನಿನ್ನ ಅರಿಯುವ ಹಂಬಲ
ಅರಿತಷ್ಟು ನೀ ರೋಚಕ
ನಿನ್ನ ಮಾತು ಕೋಮಲ
ಮಾತೆಷ್ಟು ಚುಂಬಕ
ನಿನ್ನ ಪ್ರೀತಿ ಮೃದುಲ
ಪ್ರೀತಿಯೆಷ್ಟು ಪ್ರಚೋದಕ
ಈ ಬಂಧನ ಈ ಮಿಲನ
ಬಾಳ ನೆಮ್ಮದಿಯ ದ್ಯೋತಕ
0823ಪಿಎಂ08122020
*ಅಪ್ಪಾಜಿ ಎ ಮುಸ್ಟೂರು*
No comments:
Post a Comment