Tuesday, March 30, 2021

*ಗಜಲ್*

ಬಂದ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬದುಕು 
ಜೀವ ಕೈಯಲ್ಲಿ ಹಿಡಿಸಿಯಾಯ್ತು ಬದುಕು 

ಕಣ್ಣ ಮುಂದೆ ಮನೆಯು ಕುಸಿದು
ಬೀದಿಗೆ ಬಿದ್ದಾಯ್ತು ಬದುಕು 

ಬಂಧು ಬಳಗದವರನೆಲ್ಲ ದೂರವಾಗಿಸಿ
ದಿಕ್ಕಾಪಾಲಾಗಿ ಹೋಯ್ತು ಬದುಕು 

ಹೊಲ ಗದ್ದೆಗಳನೆಲ್ಲಾ ನುಂಗಿ 
ಇನ್ನಿಲ್ಲದಂತೆ ನಾಶವಾಯ್ತು ಬದುಕು

ಬೆಟ್ಟವೇ ಕಳಚಿ ಮಣ್ಣ ರಾಶಿಯೊಳಗೆ
ದಾರಿಯ ಮುಚ್ಚಿ ನರಕವಾಯ್ತು ಬದುಕು

ಆಶ್ರಯಿಸಿದುದನೆಲ್ಲ ಹೊತ್ತೊಯ್ದು
ನಿರಾಶ್ರಿತವಾಯ್ತು ಬದುಕು 

ಸುರಿವ ಮಳೆಯಲ್ಲಿ ಕಣ್ಣೀರು 
ಕೋಡಿ ಹರಿಸಾಯ್ತು ಬದುಕು 

ಅಮುವಿನಂತರಂಗದ ರೋಧನೆಗೆ
ಕಿವಿಯಿರದೆ ಕಿವುಡಾಯ್ತು ಬದುಕು

0527ಪಿಎಂ22082018
*ಅಮು ಭಾವಜೀವಿ*
ಚಿತ್ರದುರ್ಗ 

No comments:

Post a Comment