Tuesday, March 30, 2021


*ಮರೀಚಿಕೆ*
ಭಾವ ಬತ್ತುತಿದೆ 
ಬೇಸರ ಕುತ್ತು ತಂದಿದೆ 
ಬಯಕೆಗಳೊಳಗೆಲ್ಲ
ನಿರಾಸೆಯ ಪ್ರವಾಹ ನುಗ್ಗಿದೆ

ಕಣ್ಣು ಕನಸನೇ ಮರೆತು 
ಮನವು ವ್ಯಸನಕೆ ಸಿಕ್ಕು
ತನುವು ಕೃಶವಾಗಿ
ಕುಸಿಯುತಿದೆ ಬದುಕು 

ನಂಬಿಕೆಯ ಸೂರು ಕುಸಿದು 
ಅಭಿಮಾನದ ಬೇರು ಕಡಿದು
ಸ್ವಾಭಿಮಾನವ ಅವಮಾನಿಸಿ
ಸೋಲಿಗೆ ಶರಣಾಯ್ತು ಭವಿಷ್ಯ 

ಎಲ್ಲ ಇಲ್ಲಗಳು ಸಲ್ಲದಂತಾಗಿಸಿ
ಬದುಕ ಭರವಸೆಯನ್ನು ಕಸಿದು
ಎಡವಿ ಬಿದ್ದಿರಲು ಎತ್ತದೆ
ತುಳಿದು ಅಳಿಸಿ ಹಾಕಿತು 

ಹೋರಾಟದ ಹಾದಿಯಲಿ
ಜಯವಿನ್ನು ಮರೀಚಿಕೆ 
ಗೆಲುವು ಇಲ್ಲದ ಬದುಕಿನಲಿ 
ಇರದು ನೆಮ್ಮದಿಯ ಕಾಣಿಕೆ

0928ಎಎಂ16082018
*ಅಮು ಭಾವಜೀವಿ*

No comments:

Post a Comment