Tuesday, March 30, 2021

*ಯಾರ ಶಾಪ*

ಏಕೆ ಈ ವಿಕೋಪ
ಯಾರದೋ ಈ ಶಾಪ

ಬದುಕಿನ ಆಧಾರವನ್ನೇ ಕಸಿದು
ಭರವಸೆಯ ಮಹಲೇ ಕುಸಿದು 
ಗುರಿಯ ದಾರಿಯೇ ಕಾಣದಾಗಿ
ಕಂಗಾಲಾಗಿದೆ ಭವಿಷ್ಯವು 

ಹರಿವ ನೀರೊಳಗೆ ಎಲ್ಲಾ 
ಆಸೆಗಳು ಕೊಚ್ಚಿ ಹೋಗಿ 
ನಿರಾಸೆಯ ಕೊಚ್ಚೆಯಲ್ಲಿ 
ಮತ್ತೆ ಕಟ್ಟಿಕೊಳ್ಳ ಬೇಕಿದೆ ಬದುಕು 

ಕಂಡ ಕನಸುಗಳನೆಲ್ಲ 
ಹೊತ್ತೊಯ್ಯಿತು ಪ್ರವಾಹ 
ಮುಳುಗಿದ ಬದುಕ ಕಂಡು 
ಚಡಪಡಿಸುತಿದೆ ಬಡಜೀವ

ನೆರೆಯ ಆಕ್ರೋಶಕೆ 
ನೆರೆಹೊರೆಯೂ ನರಳಾಡಿದೆ
ನಂಬಿಕೆಯ ನೆಲವೇ
ಕಾಲಡಿಯಲಿ ಕುಸಿಯುತಿದೆ

ಸಾಕು ಮಾಡು ಕಷ್ಟಗಳ ಮಳೆಯೇ
ಹಸಿವಿಂದ ನಿದ್ರೆಯಿರದೆ ಬಳಲಿರುವೆ
ಕಡಿಮೆ ಮಾಡಿಕೋ ನಿನ್ನ ಕೋಪವ
ಗಂಜಿಯ ಕುಡಿದಾದರೂ ಬದುಕುವೆ

0617ಎಎಂ19082018
*ಅಮು ಭಾವಜೀವಿ*
ಚಿತ್ರದುರ್ಗ 

No comments:

Post a Comment