*ಖಾಲಿತನ*
ಭಾವ ಬರಿದಾಗುತಿದೆ
ನೋವು ಇನ್ನೂ ಉಳಿದಿದೆ
ನೀ ಕೊಟ್ಟ ಪ್ರೀತಿಗೆ
ಸಾಟಿ ಏನಿದೆ ಜಗದಿ
ಪ್ರವಾಹದಿ ಸಿಲುಕಿದವಗೆ
ನೀನಾದೆ ಹುಲ್ಲುಕಡ್ಡಿ ಆಸರೆ
ಬೀದಿಯಲಿ ಬಿದ್ದ ಬದುಕಿಗೆ
ನೀನೊಂದು ಸೂರಾಗಿ ಸಲಹಿದೆ
ಬರೀ ಕಂಬನಿಯೇ ತುಂಬಿದ
ಬದುಕಲಿ ಸವಿಜೇನ ಉಣಬಡಿಸಿದೆ
ಕಂಡ ಕಂಡವರ ಬಾಯಿಗೆ
ಆಹಾರವಾದ ನನಗೆ
ನೀ ಅಭಿಮಾನದ ಕವಚವಾಗಿ
ಉತ್ತರ ಕೊಟ್ಟೆ ಅವರಿಗೆ
ನೀನಲ್ಲದೆ ಇನ್ನೇನು ಬೇಡ
ಎಂದು ಬಂದೆ ನೀನಿರುವಲ್ಲಿಗೆ
ವಿಧಿಯ ಪ್ರವಾಹಕೆ ಸಿಲುಕಿ
ಬಿಟ್ಟು ಹೋದೆ ನೀನಲ್ಲಿಗೆ
ಇನ್ನು ನನಗಿಲ್ಲ ಬದುಕು
ಮತ್ತೆ ಗೆದ್ದಿತು ಆ ಕೆಡುಕು
ನೊಂದು ಬೆಂದು ಬರಿದಾದೆ
ನೀನಿಲ್ಲದ ಖಾಲಿತನಕೆ ಶರಣಾದೆ
0918ಎಎಂ21082018
*ಅಮು ಭಾವಜೀವಿ*
ಜಗಳೂರು
No comments:
Post a Comment