Tuesday, March 30, 2021

ಹಾವು ಹಾಲು ಕುಡಿಯುವುದಿಲ್ಲ
ಈ ಸತ್ಯ ನಿಮಗೇಕೆ ತಿಳಿದಿಲ್ಲ 

ಕಲ್ಲು ನಾಗರದ ಮೇಲೆ 
ಶುದ್ಧ ಹಾಲನು ಎರೆದು
ಭಕ್ತಿ ಪರವಶವಾದರೇನು
ಕಲ್ಲೆಂದಾದರೂ ಮೆದುವಾಗುವುದೇನು

ಗೆದ್ದಲು ಕಟ್ಟಿದ ಹುತ್ತದ ಬಾಯಿಗೆ 
ತನಿ ಎರೆದರೆ ಬರುವುದೇ ಭಾಗ್ಯ
ಪೂಜೆಗೈದು ಪಾಪ ಕಳೆವುದಾದರೆ
ಜಗಕೆಂದೂ ಇರುತಿರಲಿಲ್ಲ ದೌರ್ಭಾಗ್ಯ

ಹಬ್ಬದ ಆಚರಣೆ ಇದು 
ನಮ್ಮ ಸಂಭ್ರಮಕೆ
ಆದರೇಕೆ ಅವು 
ಸಿಲುಕಬೇಕು ಸಂಕಷ್ಟಕೆ

ಸಂಪ್ರದಾಯದ ಕಟ್ಟಳೆಯ ಬಿಚ್ಚಿ 
ಸತ್ಯದ ಸಂಸ್ಕಾರ ಅರಿಯೋಣ ಬನ್ನಿ 
ಹಸಿದ ಎಷ್ಟೋ ಮಕ್ಕಳಿಹರು ಬೀದಿಯಲ್ಲಿ 
ಅವರ ಬಾಯಿಗೆ ಅಮೃತ ಕುಡಿಸುವ ತನ್ನಿ

ವ್ಯರ್ಥ ಮಾಡುವ ಕಾಲವಿದಲ್ಲ
ಅಪಾರ್ಥ ಮಾಡಿಕೊಳ್ಳುವನು ದೇವರಲ್ಲ
ಪೂಜೆ ನೆರವೇರಿಸಿ ಪ್ರಸಾದ ನೀವು
ಹಂಚಿರಿ ಮಕ್ಕಳೇ ನಿಜ ದೈವವು

0418ಪಿಎಂ12082018

*ಅಮು ಭಾವಜೀವಿ*
ಚಿತ್ರದುರ್ಗ 

No comments:

Post a Comment