*ಬದುಕಿನ ಒತ್ತಾಸೆ*
ಕನಸುಗಳು ನೂರು ಕಮರಿದವು
ಸಮತೋಲನದ ಬದುಕಿನಲ್ಲಿ
ಬಂಧ ಸಂಬಂಧಗಳು ಅಳಿದುಳಿದವು
ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ
ನಡೆವ ಹಾದಿಗೆ ಎಲ್ಲವೂ ಮುಖ್ಯ
ಅಲ್ಲಿ ಸಿಗಬೇಕು ಸಹಪಯಣಿಗರ ಸಖ್ಯ
ಕೈಹಿಡಿದು ಕರೆದೊಯ್ಯುವವರು
ಹಾದಿ ತಪ್ಪಿಸಲು ಬಾಳಲ್ಲಿಲ್ಲ ಸೌಖ್ಯ
ನಂಬಿಕೆಯ ನೆರಳಿನಲಿ
ಅರಳಿದ ಹೊತ್ತು
ಅಂಜಿಕೆಯ ನರಳಿಕೆಯಲ್ಲಿ
ನೆಲಕಚ್ಚಿಸಿತು ಆಪತ್ತು
ಕಳೆಯುತಿದೆ ವಯಸ್ಸು
ಕಡಿಮೆಯಾಗುತಿದೆ ಆಯಸ್ಸು
ಸಿಕ್ಕ ಸ್ವಲ್ಪ ಸಮಯದಲಿ
ಕಟ್ಟಿಕೊಳ್ಳಬೇಕು ಭವಿಷ್ಯ
ಬಯಸಿದುದೆಲ್ಲ ಕೈಜಾರುವಾಗ
ಕಂಗಾಲಾದ ಬದುಕಿಗೇಕೋ
ಮತ್ತೆ ಕಟ್ಟಿಕೊಳ್ಳವ ಭರವಸೆ
ಬದುಕಿನದು ಎಂತಹ ಒತ್ತಾಸೆ
0513ಎಎಂ26082018
*ಅಮು ಭಾವಜೀವಿ*
ಮುಸ್ಟೂರು
No comments:
Post a Comment