ಹೇಗೆ ಮರೆಯಲಿ ಗೆಳೆಯ
ನೀ ಬಿಟ್ಟು ಹೋದ ನೆನಪುಗಳ
ನೋಯುತಿದೆ ಈ ಜೀವ
ಸಹಿಸಲಾರೆ ಈ ಅಗಲಿಕೆಯ
ನಿನ್ನ ನಿತ್ಯದ ತುಂಟಾಟಗಳು
ಕಣ್ಣ ಮುಂದೆ ಬಂದು ಹೋಗುತಿವೆ
ನಿನ್ನ ಒಡನಾಟವ ನೆನೆನೆನೆದು
ಹೃದಯ ಭಾರವಾಗಿದೆ ಈ ಸಾವು ನ್ಯಾಯವೆ
ಅರ್ಜಿಸಿಕೊಳ್ಳಲಾರೆ ಅರ್ಜುನ
ನಿನ್ನ ಈ ವಿದಾಯ
ಕಣ್ಣೆದುರೇ ಕೈತಪ್ಪಿಹೋದೆ
ಕರುಣೆಯಿಲ್ಲ ಸಾವಿಗೆ
ಇಷ್ಟೇ ನಮ್ಮಿಬ್ಬರ ಋಣಾನುಬಂಧ
ಹೋಗು ಗೆಳೆಯ ಮತ್ತೆ ಬರದಿರು
ಈ ಪಾಪಿ ಜಗದಲಿ ಪ್ರೀತಿಗೆ ನೆಲೆಯಿಲ್ಲ
ನಿನ್ನ ಮೇಲೆ ಅಮಾಯಕ ಜೀವಕೆ ಬೆಲೆಯಿಲ್ಲ
ಕಂಬನಿಯಲಿ ಬೀಳ್ಕೊಡುವೆ
ಕರದಿಂದೆತ್ತಿ ಅಂತ್ಯಸಂಸ್ಕಾರಗೈವೆ
ಈ ನೋವು ನಿರಂತರ
ನಿನ್ನ ಸಾವು ಬಲು ಘೋರ
0946ಪಿಎಂ05042021
ಅಪ್ಪಾಜಿ ಎ ಮುಸ್ಟೂರು
ಪ್ರೀತಿಯ ಅರ್ಜುನನ ದುರಂತ ಸಾವಿನ ಕುರಿತು ಬರೆದದ್ದು
No comments:
Post a Comment