*ಹೆಣ್ಣೆಂದರೆ ಹೆಮ್ಮೆ*
ಒಡಲೊಳಗೆ ಬೆಂಕಿ ಬಿದ್ದರೂ
ಮೊಗದಲಿ ನಗುವ ಜೀವ ಹೆಣ್ಣು
ಮನದೊಳಗೆ ನೂರಾಯಸೆಗಳಿದ್ದರೂ
ಬದುಕಲಿ ಪರಿತ್ಯಕ್ತೆಯಾಗಿರುವಳು ಹೆಣ್ಣು
ಹೃದಯದಲಿ ನೋವು ಆಳಿದರೂ
ನಗುವ ಹಂಚಿ ಬಾಳ ಪೊರೆಯುವಳು ಹೆಣ್ಣು
ಕೈಹಿಡಿದವನ ಅಶಕ್ತತೆಯ ತೋರಗೊಡದೆ
ಬದುಕಿನ ಯಾನಕೆ ಶಕ್ತ ಸಾರಥಿಯಾಗುವಳು ಹೆಣ್ಣು
ತನ್ನೆದೆಯ ಭಾವಗಳಿಗೆ ಪೆಟ್ಟು ಬಿದ್ದರೂ
ಸಂಸಾರದ ಗುಟ್ಟು ರಟ್ಟು ಮಾಡದೆ ಬಾಳುವಳು ಹೆಣ್ಣು
ನಂಬಿಸಿದವರು ನಡುನೀರಲ್ಲಿ ಕೈಬಿಟ್ಟರೂ
ಬಾಳನೌಕೆಯ ದಡ ಮುಟ್ಟಿಸುವಳು ಹೆಣ್ಣು
ಹೆಣ್ಣು ಹುಟ್ಟಿತೆಂದು ಕುಗ್ಗಿಹೋಗದೆ
ಹೆಮ್ಮೆಯಿಂದ ಹೇಳಿ ಮಗನಿಗಿಂತಲೂ
ಮಗಳೇ ಹೆಚ್ಚು ಎಂದು
0425ಎಎಂ21022021
ಅಮುಭಾವಜೀವಿ ಮುಸ್ಟೂರು
ತಪ್ಪುಗಳನ್ನು ಅಳಿಸಲಾಗದು
ಆದರೆ ತಿದ್ದಿಕೊಳ್ಳಬಹುದು
ತಪ್ಪು ಮಾಡದವರಾರಿಲ್ಲ
ಆದರೆ ತಿದ್ದಿ ನಡೆವವರಿಗೆಂದೂ ಸೋಲಿಲ್ಲ
ತಪ್ಪು ಅರಿಯದೇ ಆದರೆ ಕ್ಷಮೆಯಿದೆ
ಅರಿತು ಮಾಡುವ ತಪ್ಪಿಗೆ ಶಿಕ್ಷೆ ಬೇಕಿದೆ
ತಪ್ಪು ಮಾಡಿ ಮೆರೆಯದಿರು
ಒಪ್ಪಿಕೊಳ್ಳವುದೇ ಪ್ರಾಯಶ್ಚಿತ್ತವು
0753ಪಿಎಂ21022021
*ಅಮುಭಾವಜೀವಿ ಮುಸ್ಟೂರು*
*ಕಂಬನಿ*
ಈ ಕಂಬನಿಗೂ ಕೂಡ
ಬೇಜಾರಿದೆ ನೀ ನೊಂದುದಕೆ
ಬದುಕು ಕೊಟ್ಟ ಹೊಡೆತಕೆ
ಸೋತ ಹೃದಯದ ತಲ್ಲಣಕೆ
ಕಣ್ಣ ಹನಿಯ ಕಾಣಿಕೆ
ಕಂಪಿಸುತ್ತಿದೆ ಮನವು
ತಂಪಿಲ್ಲದ ಬದುಕಿಗಾಗಿ
0700ಎಎಂ22022021
*ಅಮುಭಾವಜೀವಿ ಮುಸ್ಟೂರು*
[2/22, 7:36 AM] +91 6364 619 967: ಕಣ್ಣ ಹನಿ ಕಾಣಿಕೆ "wow amezing words amu🌹ಶೌಕತ್ ಅಲ
*ಹಾಯ್ಕು
*ದಾರಿ*
ನೀನು ಬರುವ
ದಾರಿ ಕಾದೆ ನಿತ್ಯವೂ
ಸುಳಿವೇ ಇಲ್ಲ
*ಆಸೆ*
ಬಾಳೋ ಜೀವಕೆ
ಆಸೆ ದುಃಖಕ್ಕೆ ಮೂಲ
ತಿಳಿಯಲಿಲ್ಲ
0140ಪಿಎಂ22022021
*ಅಮುಭಾವಜೀವಿ ಮುಸ್ಟೂರು*
*ಕೀಲಿಕೈ*
ಎನ್ನ ಹೃದಯ ನಿನಗೆ ಮೀಸಲು
ನೀನೆಂದಿಗೂ ಅದಕೆ ಕಾವಲು
ಪ್ರೀತಿಯ ಕೀಲಿಕೈ ನಿನ್ನೊಪ್ಪಿಗೆಯಲ್ಲಿದೆ
ಕದ ತೆರೆಯುವ ಮೂಲಕ ಖುಷಿಯನು ಹಂಚು
ನಲಿಯುತ ಅಡಿಯಿಡುವೆ ಆ ಗುಡಿಗೆ
ನಗುವಿನ ಬೆಳಕ ನೀ ಚೆಲ್ಲು
ನನ್ನೊಲವಿಗೆ ಆಸರೆಯಾಗಿ ನಿಲ್ಲು
ಬಾಳಿನ ಬುತ್ತಿ ಬಿಚ್ಚಿ ಸವಿಯೋಣ
0158ಪಿಎಂ22022021
*ಅಮುಭಾವಜೀವಿ ಮುಸ್ಟೂರು*
ನಂಬಿಕೆಯ ಗೋಡೆ
ಕುಸಿದು ಬೀಳಲು
ಕನಸುಗಳೆಲ್ಲ ಮಣ್ಣು
ಪ್ರೀತಿಯ ಆಸರೆ
ಕಳಚಿಕೊಳ್ಳಲು
ಬದುಕು ನಶ್ವರ
ಸುಳ್ಳಿನ ಸಾಮ್ರಾಜ್ಯದಲಿ
ವ್ಯಕ್ತಿತ್ವ ಸರ್ವನಾಶ
ನೀಡದು ಸಂತೋಷ
0557ಎಎಂ24022021
ಅಮುಭಾವಜೀವಿ ಮುಸ್ಟೂರು .
ಭಾವವೀಗ ಬಲಿಯಾಗುತಿದೆ
ಬವಣೆ ಹೊತ್ತು ನರಳುತಿದೆ
ಸುಳ್ಳಿನ ಮುಳ್ಳಿನ ಮೇಲೆ
ನೋವಲಿ ಹೊರಳಾಡುತಿದೆ
ಮತ್ತೆ ಮತ್ತೆ ನೆನೆಯುತ್ತಾ
ಸತ್ತೆ ಎಂದು ಕೊರಗುತ್ತಾ
ಬಯಲಾದ ಸತ್ಯಕೆ ಹೆದರಿ
ಭೀತಿಗೊಂಡಿದೆ ನಡುಗುತ್ತಾ
ಪದಗಳು ಸಾಕ್ಷಿಯಾಗಿರಲು
ಭಾವವು ಸ್ಪಷ್ಟವಾಗಿರಲು
ನೋಡುವ ನೋಟಕೆ ಅನುಮಾನ
ನ್ಯಾಯ ಮೌನತಳೆದಿರಲು
ಎದೆಯಾಳದಿ ಮೂಡಿದ ಭಾವನೆಗಳು
ಎದುರಾಡಲು ಸೋತ ಸಾಲುಗಳು
ಎದುರೀಜಲಾಗದೆ ಚಡಪಡಿಸಿ
ಎದೆಗುಂದವೆ ನೊಂದ ಭಾವಗಳು
ಬೇಡವೇ ಬೇಡ ಈ ಭಾವದ ನಂಟು
ಕಳಚಿಕೊಳ್ಳುತಿದೆ ಬಂಧದ ಗಂಟು
ಉಳಿಸಿಕೊಳ್ಳಲು ಹೆಣಗಾಡುತಿಹೆ
ಬಲಗೊಳಿಸಲಿ ನಂಬಿಕೆಯ ಅಂಟು
0918ಎಎಂ24022021
ಅಮುಭಾವಜೀವಿ ಮುಸ್ಟೂರು
[2/24, 6:46 PM] ಸಂತೋಷ ಕೆಂಭಾವಿ ಯುಎಸ್ಎ: ಭಾವನೆ ಬತ್ತದ ಅಮುಭಾವಜೀವಿ ...ಸುಂದರ ರಚನೆ ಸರ್
👌🙏
ಮಧುರಾಲಿಂಗನ ಬಯಸೋ
ಜೀವಕ್ಕೆ ಕ್ರೌರ್ಯದ ಆಕ್ರಮಣ
ಮಧು ಹೀರಿದ ದುಂಬಿಯ ಕೃತ್ಯದಿ
ಪರಾಗ ಸ್ಪರ್ಶದ ಕಾರಣ
ಹೂ ಒಡಲಲಿ ಈಗ
ಬೀಜಾಂಕುರದ ಪರಿಣಾಮ
ಸುಮವು ಬಾಡಿ ಕಾಯುದಿಸಿ
ನೊಂದು ನರಳಿದೆ ಕಾಣದೆ ಪ್ರೇಮ
ನಡು ನೀರಲಿ ಕೊಚ್ಚಿ ಹೋಗುವ
ಬದುಕಿಗಾಸರೆಯಾದ ಹುಲ್ಲುಕಡ್ಡಿಯೂ ಕೂಡ
ಮುಳ್ಳಾಗಿ ಚುಚ್ಚಿ ಎದೆಬಗೆದು
ನೋವಿನ ನೆತ್ತರ ಪ್ರವಾಹ
ಬದುಕನ್ನೇ ಮುಳುಗಿಸುವ ದುಗುಡ
0108ಎಎಂ25022021
ಬೇಲಿಯೇ ಮೇಲೆ ಬಿದ್ದು
ಸುಮದೆದೆಯ ಬಗೆದು
ಕ್ರೂರ ದುಂಬಿ ತಂದ
ಪರಾಗಸ್ಪರ್ಶದಿಂಡ
ದಳ ಹರಿದೊಡಲಲಿ
ಅಂಡ ಪಿಂಡಿದುಗಮ
ದುಂಬಿಯ ದೌರ್ಜನ್ಯ ಗೌಣ
ಎದೆಗಿರಿದ ಮುಳ್ಳಿಂದ ನೋವುಲ್ಬಣ
ಬಲವಂತವಾದರೂ ತಪ್ಪು ಹೂವಿಂದೆಂದು
ಬಳಿ ಬರಲಿಲ್ಲ ಯಾವ ಬಂಧು
ಬಿರುಗಾಳಿಗೆ ತುತ್ತಾದ ಜೀವನ ಬಳ್ಳಿಗೆ
ಆಸರೆಯಾದ ಮರವೂ ಕೂಡ ಮುಳ್ಬಿಟ್ಟು
ಕಾಯ ಮೇಲೆರಗಿ ಮತ್ತೆದೇ ನೋವು
ಅತಿಯಾಗಿ ನೊಂದಿದೆ ಹೂವು
ತೊಟ್ಟುಕಳಚುವ ತನಕ ಈ
ದಿಟ್ಟತನದ ಹೋರಾಟಕಂತ್ಯವಿಲ್ಲ
ಬಿರುಗಾಳಿಯ ಪಿಸುಮಾತಿಗಂಜಿ
ತಂಗಾಳಿ ಕೂಡ ಬಳಿಸುಳಿಯದಲ್ಲ
0130ಎಎಂ25022021
ಅಪ್ಪಾಜಿ ಎ ಮುಸ್ಟೂರು
ಮೊರೆಯ ಕೇಳು ಮಾಧವ
ನೀಗು ನನ್ನೆದೆಯ ನೋವ
ಒಂಟಿತನದ ನನ್ನ ವೇದನೆಗೆ
ತೋರು ನೀ ಉಪಶಮನವ
ಬದುಕಿನ ಪ್ರತಿ ಗಳಿಗೆಯಲ್ಲಿ
ಸೋಲುಗಳದೇ ಪಾರುಪತ್ಯ
ಬೇಸತ್ತು ಕೂತ ಮನಸ್ಸಿಗೆ
ಬೇಕು ನಿನ್ನ ಸಾಂತ್ವನದ ಸಾಂಗತ್ಯ
ಚಿರವಿರಹಿಯೆಂಬ ಅನುಕಂಪದ
ಮಾತು ನನಗೆ ಬೇಡ ಮಾಧವ
ಚಿರಪ್ರೇಮಿಯಾಗಿ ನೀ ಸ್ವೀಕರಿಸಿದ
ಮೇಲೆ ವಿರಹ ಇನ್ನೆಲ್ಲಿ ಅಲ್ಲವಾ
ಆತ್ಮಸಖ ನೀನೆನಗೆ
ಆತ್ಮಬಲ ತುಂಬಿರುವೆ
ಆನಂದದ ಮೊಸರು ಕಡೆದು
ಆ ನೆಮ್ಮದಿಯ ಬೆಣ್ಣೆ ತೆಗೆದಿರುವೆ
ನನಗೆ ಈಗ ಬೇಕಿರುವುದು
ನಿನ್ನೊಲವಿನ ಕೊಳಲ ದನಿ
ಅದ ಕೇಳದ ನನ್ನೆದೆಯೊಳಗೆ
ಕುದಿಯುತ್ತಿದೆ ನೋವಿನ ಕಂಬನಿ
ಮೊಳಗಿಸು ಮಾಧವ
ತೊಲಗಿಸು ಈ ನೋವ
ಬಳಲಿದ ಜೀವಕೆ ಮತ್ತೆ
ನೀ ತಂದುಬಿಡು ಚೇತನವ
0814ಎಎಂ25022021
ಅಮು ಭಾವಜೀವಿ ಮುಸ್ಟೂರು
ಒಂದು ಕಡೆ ನಿಲ್ಲುವುದಿಲ್ಲ
ಮನಸ್ಸು ಮತ್ತು ಬದುಕು
ಬೇಕಾದಾಗ ನಿಲುಕುವುದಿಲ್ಲ
ಬೇಡವಾದಾಗ ಬಿಡುವುದಿಲ್ಲ
ನಿತ್ಯ ಬದಲಾಗುವ ಕ್ರಿಯೆ
ಸತ್ಯ ಅರಿಯದ ಮಾಯೆ
ನೋವು ನಲಿವುಗಳ ಏರಿಳಿತ
ಕಷ್ಟ ಸುಖಗಳ ಸಮ್ಮಿಳಿತ
ಈ ಪಯಣ ಬದುಕಲು ಪ್ರೇರಣ
0759ಪಿಎಂ25022021
*ಅಮುಭಾವಜೀವಿ ಮುಸ್ಟೂರು*
ಮುದ್ದು ಮುಖದ ಚೆಲುವೆ
ಕನಸಲರಳಿದ ಹೂವೆ
ಸೆಳೆದಳು ಮುಗ್ಧ ಮನಸನ್ನು
ಪ್ರೀತಿಯ ಮಧುವನದಿ
ಜೋಡಿ ದುಂಬಿಗಳಂತೆ
ಕಲೆತು ಸವಿದರು ಅಧರಾಮೃತ
ಅವಳ ತೋಳುಗಳ ಬಾಚಿ
ತಬ್ಬಿ ಹಿಡಿದು ಮೌನದಲಿ
ಮನಬಿಚ್ಚಿದರು ಒಲವಲಿ
ಎದೆಯ ಮೇಲೆ ತಲೆಯಿಟ್ಟು
ಅವಳುಲಿವ ಮಾತಿಗೆಲ್ಲ
ಬಂಧ ಬಿಗಿಗೊಳಿಸಿ ತಲ್ಲೀನನಾದ
ಸುಮದ ಮಧುರ ಗಂಧ
ತಂಗಾಳಿಯ ತಂಪು ಚೆಂದ
ಮೈಮರೆತು ಜಾರಿದವು ಕನಸಿಗೆ
ಸಮಯದ ಪರಿವೇ ಇಲ್ಲ
ಭಾವದಿ ಬೆಸೆದುಕೊಂಡಿವೆಯೆಲ್ಲ
ಚೆಲುವಿನೊಲವ ಜೋಡಿಗಳು
ನಿಶ್ಯಬ್ದದ ರಾತ್ರಿಯಲಿ
ಪ್ರಕ್ಷುಬ್ದಗೊಳ್ಳದ ಮನದಲಿ
ಒಲವಾಮೃತ ಸವಿದವೀ ಜೋಡಿ
ಕನಿಸಿನ ತೆರೆ ಸರಿದಾಗ
ಹಾಸಿಗೆಯಲಿ ಒಬ್ಬನೇ ಆಗ
ಮಧುರ ಕನಸಿಗೊಲಿದಾನೋ
0305ಪಿಎಂ26022021
ಅಪ್ಪಾಜಿ ಎ ಮುಸ್ಟೂರು
#ಅಮುಭಾವಬುತ್ತಿ 402
*ಎಲ್ಲಿರುವೆ*
ಕಾಯುತಿರುವೆ ನಿನಗಾಗಿ
ಎಲ್ಲಿರುವೆ ನನ್ನೊಲವೆ
ಒಂಟಿತನದ ಬೇಗುದಿ
ಕಳೆಯುತಿದೆ ನೆಮ್ಮದಿ
ಬೇಗ ಬಳಿ ಬಾ ಚೆಲುವೆ
ಪ್ರೀತಿಯ ಹಸಿವ ನೀಗಲು
ಸಂಗಾತಿ ನೀ ಜೊತೆಯಾಗಲು
ಕಾದು ಕುಳಿತಿರುವೆ
ಇನ್ನು ಸತಾಯಿಸದೆ ಬಂದು ಸೇರು
ನಮ್ಮೊಲವಿಗಿಲ್ಲ ಯಾವ ತಕರಾರೂ
ದಂಪತಿಗಳಲ್ಲವೇ ನಾವಿಬ್ಬರೂ
1026ಪಿಎಂ28022021
No comments:
Post a Comment