Wednesday, April 7, 2021

*ಪ್ರಯೋಜನ ಶೂನ್ಯ*

ಬೀದಿಗೆ ಬಿದ್ದಿದೆ ಬದುಕು 
ಬೆನ್ನೆಲುಬಿನ ಒಳಗೆ ಹುಳುಕು 
ಯಾರಿಂದಲೂ ಸಿಗಲಿಲ್ಲ ಪರಿಹಾರ 
ಹೋರಾಟವೇ ನಿತ್ಯದ ನಮ್ಮ ಬದುಕು 

ಕಾಯಿದೆಗಳು ಬಂದರೂ 
ಕಾರಣಗಳು ನೂರಾರು 
ಪ್ರಯೋಜನ ಮಾತ್ರ ಶೂನ್ಯ 
ಪ್ರತಿಭಟನೆ ಅಗ್ರಮಾನ್ಯ 

ಎಲ್ಲರೂ ಅವನ ಪರ 
ಹಿಡಿಯುವ ತನಕ ಅಧಿಕಾರ 
ಮಾತು ಮರೆಯುವರು ಆನಂತರ 
ಅವನ ಶ್ರಮ ತಪ್ಪಲಿಲ್ಲ ನಿರಂತರ 

ಉತ್ತುವ ಅವನಿಗೆ ಬಿತ್ತಿ ಬೆಳೆಯುವ ಕನಸು 
ಬೆವರು ಹರಿಸಿದರೂ ಸಿಗಲಿಲ್ಲ ಯಶಸ್ಸು 
ಆದರೂ ಕುಂದದು ಅವನ ಹುಮ್ಮಸ್ಸು 
ಬಾಗಿದವನು ಬೀಗಲಿಲ್ಲ ಮುಗಿದರೂ ಆಯಸ್ಸು 

ಬೆಳೆದ ಬೆಳೆಗೆ ಇಲ್ಲ  ಬೆಲೆ 
ಎಲ್ಲಾ ದಲ್ಲಾಳಿಗಳ ಲೀಲೆ 
ನೆತ್ತಿ ಮೇಲೆ ಮಣ್ಣು ಹೊತ್ತು ಅವ ಸತ್ತ 
ಉನ್ನತಿಯ ಪಡೆದರು ಅವನ ರೈತ(ರಕ್ತ ) ಹೀರುತ್ತಾ 

ಬೆಳೆ ಬೆಳೆದ ಅವನಿಗೆ 
ಇರಲಿ ಬೆಲೆ ನಿಗದಿಯ ಅಧಿಕಾರ 
ಸ್ವಂತಿಕೆಯಿಂದ ಬದುಕುವನು ಆಗ 
ಬೇಕಿಲ್ಲ ನಿಮ್ಮಗಳ ಪರಿಹಾರ 

೦೭೩೩ಎಎಂ೦೯೧೨೨೦೨೦
*ಅಪ್ಪಾಜಿ ಎ ಮುಷ್ಟೂರು*


*ಸಾಂತ್ವನದ ಮಾತು*

ನಿನ್ನ ಸಾಂತ್ವನದ ಮಾತು ಕೇಳಿ 
ಪರಮಾನಂದವಾಯ್ತು ಮನಸ್ಸಿಗೆ 
ನಿರೀಕ್ಷೆಗಳು ಮತ್ತೆ ಗರಿಗೆದರಿವೆ 
ಭರವಸೆ ತುಂಬಿರಲು ನನಗೆ 
ಬೆಳೆಯಬೇಕು ಎತ್ತರಕ್ಕೆ 
ಆಡಿಕೊಳ್ಳುವವರಿಗೆ 
ಉತ್ತರ ನೀಡುವುದಕ್ಕೆ 
ನಿನ್ನ ಬೆಂಬಲವಿರಲಿ ನಿರಂತರ 
ಗೆದ್ದು ನೀಡಿವೆ ಅವರಿಗುತ್ತರ 

೦೨೩೨ಪಿಎಂ೦೯೧೨೨೦೨೦
ಅಪ್ಪಾಜಿ ಎ ಮುಷ್ಟೂರು 
*ಜೀವನ ಪಾಠ*

ಬಾಳೆಂದು ಮುಳ್ಳಲ್ಲ 
ಕಷ್ಟಗಳು ಹೊಸದಲ್ಲ 
ಎದುರಿಸಿ ಬದುಕಬೇಕು ನಿತ್ಯ 
ಸೋಲಿಗೆ ಕುಗ್ಗದೆ 
ಗೆಲುವಿಗೆ ಹಿಗ್ಗದೆ 
ಸಮಭಾವದಿ ಬಾಳ ಸವಿಬೇಕು 
ನಾಳೆಗಳ ನಿರೀಕ್ಷೆಗಿಂತ 
ನಿನ್ನೆಗಳ ಪರೀಕ್ಷೆಗಿಂತ 
ಇಂದಿನ ಯಶಸ್ಸಿಗೆ ಶ್ರಮಿಸಬೇಕು 
ನೋವುಗಳ ಪುಟ ತಿರುವಿ 
ನಲಿವುಗಳ ಕವಿತೆ ಹಾಡಿ 
ನೆಮ್ಮದಿಯ ಭರವಸೆ ಹೊಂದಬೇಕು 

೦೫೧೬ಪಿಎಂ೦೯೧೨೨೦೨೦
*ಅಪ್ಪಾಜಿ ಎ ಮುಷ್ಟೂರು*

#ಅಮುಭಾವಬುತ್ತಿ ೨೪೫

*ಹಾಯ್ಕು*

ಪ್ರಣಯ ಕಾಂತೆ 
ಬಾಳ ಪಥದಲಿ ನೀ
ಭಾಗ್ಯ ದೇವತೆ
0703ಪಿಎಂ10122020
*ಅಪ್ಪಾಜಿ ಎ ಮುಸ್ಟೂರು*

*ಹಾಯ್ಕು*

ಬಿಂಬಿಸಲಿದೆ
ಒಲವಿನ ಹಣತೆ
ನೀನೇ ಕನ್ನಡಿ

0715ಪಿಎಂ10122020
*ಅಪ್ಪಾಜಿ ಎ ಮುಸ್ಟೂರು*

*ಏಕಾಂಗಿ*

ಏಕೆ ಈ ನೋವ 
ನನಗಿತ್ತು ಹೋದೆ 
ಬಾಳ ಹಾದಿಯಲಿ 
ನೆರಳಿಲ್ಲದಂತೆ ಮಾಡಿದೆ
ಮೌನದೊಡವೆ ತೊಟ್ಟು 
ಬಾಳುವಾಸೆಯ ಬಿಟ್ಟು 
ಒಬ್ಬಂಟಿಯಾಗಿ ಹೋದೆ
ಅರ್ಧಾಂಗಿಯಾಗಬೇಕಾದವಳ
ಏಕಾಂಗಿಯಾಗಿ ಮಾಡಿದೆ

0733ಪಿಎಂ11122020
*ಅಪ್ಪಾಜಿ ಎ ಮುಸ್ಟೂರು*

ನಿನ್ನ ನಗುವಿನಂತೆ
ಚಿಮ್ಮಿವೆ ಹನಿಗಳು 
ನವೋಲ್ಲಾಸದಿಂದ
ಮುಂಜಾನೆಯ ಈ
ಆರ್ದತೆಯಲ್ಲೂ
ರೋಮಾಂಚನವ
ತಂದಿತು ಈ ಚೆಲುವು 

0921ಪಿಎಂ11122020
*ಅಪ್ಪಾಜಿ ಎ ಮುಸ್ಟೂರು*

ಈ ನಗುವೇ ಸ್ಪೂರ್ತಿ 
ಮುನ್ನಡೆಯ ಬಾಳಿಗೆ
ಈ ನಿನ್ನ ನಿರ್ಮಲ ಪ್ರೀತಿ
ಬೆಂಗಾವಲು ನಮ್ಮ ನಾಳೆಗೆ
ಗೆಜ್ಜೆ ಕಟ್ಟಿ ಕುಣಿವ ಮನಸು
ಗುರಿ ಮುಟ್ಟಲು ಬಾಳ ಯಶಸ್ಸು 
ಅದಕೆಲ್ಲ ಕಾರಣವೇ ನೀನು
ಈ ಚೆಲುವ ಆರಾಧಕ ನಾನು 

0413ಎಎಂ12122020
*ಅಪ್ಪಾಜಿ ಎ ಮುಸ್ಟೂರು*


ಓ ನನ್ನ ಸಾಹಿತ್ಯ ಬಂಧುಗಳೇ
ಕಾಟ ಕೊಡುತ್ತಲೇ ಇರುವೆ ನಿಮಗೆ 
ಹಗಲಿನಲಿ ಇರುಳಿನಲಿ
ಸಂಜೆ ಮುಂಜಾನೆಯಲಿ
ಸಹಿಸಿಕೊಳ್ಳುತ ನಿಮ್ಮ 
ಕೈಗೂಸನೆತ್ತಿಕೊಂಡು ಬೆಳೆಸಿರಿ
ಬತ್ತಿಹೋಗದ ಭಾವದೊರತೆಗೆ
ನಿಮ್ಮ ಬೆಂಬಲವೆ ವರ್ಷಧಾರೆ
ನೀವು ಬೆಳೆಸುವ ನಿಮ್ಮದೇ ವೃಕ್ಷ 
ಭಾವದ ನೆರಳೀಯುವೆ ದಣಿಯದಿರಿ
ಮಣಿದು ಬಾಳುವೆ ನಿಮ್ಮೆದುರು
ಬೇಸರಿಸಿಕೊಳ್ಳದೆ ಸವಿದು ಬೆಳೆಸಿರಿ
ಹುಂಬ ಭಾವಗಳು ನನ್ನವು
ಜಂಭಪಡುವ ಚಂದ ಸುಮವು
ಮುಡಿವ ನೀವಿರುವವರೆಗೂ
ಮರಳಿ ಮರಳಿ ಅರಳುವೆ ನಾನು 

0605ಎಎಂ12122020
ಅಪ್ಪಾಜಿ ಎ ಮುಸ್ಟೂರು 


No comments:

Post a Comment