Sunday, April 11, 2021

*ಸಜ್ಜನ ಬದುಕು*

ಅವಹೇಳನಕೆ ಅಂಜದೇ
ಬಾಳಲೇಬೇಕು ಇಲ್ಲಿ 
ಪಿತೂರಿಗಳಿಗೆ ತಕ್ಕ 
ಉತ್ತರ ಕೊಡುತಲಿ
ಸುಳ್ಳಿನ ಸರಮಾಲೆ 
ಹರಿದು ಹಾಕುವ ತನಕ
ಹೋರಾಡಬೇಕು ಸತ್ಯಾನ್ವೇಷಣೆಗೆ
ಜಯದ ಆ ಪರಿಭ್ರಣೆಯಲ್ಲಿ
ಸೋಲಿನ ರಾತ್ರಿಯೂ ಉಂಟು 
ಗೆಲುವಿನ ಬೆಳದಿಂಗಳು ಉಂಟು 
ಸರ್ವಹಿತ ಪಥದಿ ನಡೆದು
ಸಜ್ಜನನಾದರಷ್ಟೇ ಸಾರ್ಥಕ ಬದುಕು

0521ಎಎಂ18062020
*ಅಮುಭಾವಜೀವಿ ಮುಸ್ಟೂರು*

[6/18, 8:35 AM] +91 78995 03158 ದೇವಿದಾಸ್ ಅವರ ಪ್ರತಿಕ್ರಿಯೆ : ಸಜ್ಜನನ ಬದುಕಿನ ಕುರಿತು ಹನಿಗವನದಲ್ಲಿ ಸೊಗಸಾಗಿ ಬಿಂಬಿಸಿದ್ದಿರಿ.ಬದುಕು ಹೇಗೆ? ಅಂದರೆ ನಾವು ಹೇಗೆ ಅನುಸರಿಸಿಕೊಂಡು ಸಾಗುತ್ತೇವೆಯೊ ಹಾಗೆ ವಾವ್👍👌


*ನೀನಿರು ಸಾಕು*


ಇರು ನೀ ನೋವಿಗೆ ಹೆಗಲಾಗಿ
ಸೇರು ನೀ ಏಕಾಂತದಿ ಜೊತೆಯಾಗಿ 
ಮಾತಾಗು ನೀ  ನಾನಿರುವಾಗ ಮೌನವಾಗಿ
ನನ್ನೊಂದಿಗಿರು ಸ್ನೇಹದ ಆಸರೆಯಾಗಿ 
ಬೇಸತ್ತು ಕೂತಾಗ ನೀನಿರುವ ಸ್ಪೂರ್ತಿಯಾಗಿ
ಸೋತು ಕೈಚೆಲ್ಲಿದಾಗ ನೀ ಬಾ ಬೆಂಬಲವಾಗಿ 
ಪ್ರತಿ ಕ್ಷಣವೂ ನಗುತ ನಗಿಸುತಿರು 
ದುಃಖದಲಿರಲು ಧೈರ್ಯ ತುಂಬುತಿರು
ದ್ವೇಷಿಸುವವರ ನಡುವೆ ನೀ ನನ್ನ ಪ್ರೀತಿಸು
ನಾ ಏರುವ ಎತ್ತರಕ್ಕೆ 
ನೀ ಹತ್ತಿರವಾಗಿರು 

0249ಪಿಎಂ18062020
*ಅಮುಭಾವಜೀವಿ ಮುಸ್ಟೂರು*

No comments:

Post a Comment