Wednesday, April 7, 2021

ನಾನು ನನಗಾಗಿ ಏನನ್ನೂ ಕೇಳುವುದಿಲ್ಲ 
ನನಗಿಲ್ಲದ ಎಲ್ಲವೂ ಸಿಗಲಿ 
ನನ್ನೊಡಲ ಕುಡಿಗಳಿಗಾಗಿ 
ಬಡತನವನ್ನೇ ಹಾಸಿ ಹೊದ್ದು 
ಚಿಂದಿ ಬಟ್ಟೆಯಲ್ಲಿ ಜೀವನ ಕಳೆದು 
ಅರೆಹೊಟ್ಟೆಗೆ ಉಂಡದ್ದು ನನಗಷ್ಟೇ ಸಾಕು 

ಉಳ್ಳವರು ಮಾಡಿದ ಅವಮಾನ 
ಇಲ್ಲದವರ ಕೆಚ್ಚೆದೆಯ ಸ್ವಾಭಿಮಾನ 
ಎಲ್ಲಾ ಪಾಠವನ್ನು ಕಲಿಸಿತು ಜೀವನ 
ನುಂಗಿಕೊಂಡ ನೋವುಗಳೆಷ್ಟೋ 
ಪಟ್ಟ ಕಷ್ಟಗಳು ಬೆಟ್ಟದಷ್ಟು 
ಎದೆಗುಂದದೆ ಬದುಕಿದೆ ಇಷ್ಟಪಟ್ಟು 

ಹಣದ ಮಾನದಂಡದ ಮುಂದೆ 
ಗುಣದ ಮಾನವೀಯತೆ ನಿರರ್ಥಕ 
ಸಹಿಸಿ ಬದುಕಿದಾಗಲೇ ಜೀವನ ಸಾರ್ಥಕ 
ಈಗ ಗೆದ್ದಿರುವೆ ಬದುಕನ್ನು 
ಮುದ್ದಿನಿಂದ ಸಲಹುವೆ ಒಡಲ ಕುಡಿಗಳನ್ನು
ಎದೆಗುಂದದ ಆತ್ಮವಿಶ್ವಾಸವೇ ಹಾದಿ ನನಗಿನ್ನು

೦೮೨೦ಎಎಂ೦೬೦೨೨೦೨೧
ಅಪ್ಪಾಜಿ ಎ ಮುಷ್ಟೂರು 

*ನಡೆ ನುಡಿ*

ನಡತೆಯ ಮೇಲೆ ಗೌರವವಿದೆ 
ನುಡಿಯಲಿ ನಡತೆ ಕಾಣಿಸುತ್ತದೆ
ನಡೆನುಡಿ ಸರಿಯಾಗಿದ್ದರೆ 
ವ್ಯಕ್ತಿತ್ವಕೊಂದು ಬೆಲಿಯಿದೆ
ನಡೆ ನುಡಿ ಅದಲು ಬದಲಾದರೆ
ನಂಬಿಕೆ ದೂರವಾಗುವುದು
ಅಗೌರವ ಹೆಗಲೇರುವುದು
ಎಂದೂ ಹಾಗಾದಿರಲಿ 


0436ಪಿಎಂ06022021
*ಅಪ್ಪಾಜಿ ಎ ಮುಸ್ಟೂರು*

ಎಲ್ಲವೂ ಕೈತಪ್ಪಿಹೋಯ್ತು
ಮೊದಲಾಗಿ ನೀನು ಕೂಡ 
ಆ ನೋವಿನ ಮುಂದೆ 
ಬೇರೇನೂ ಬೇಕಾಗಿಲ್ಲ 
ಸೋಲೊಪ್ಪಿ ಶರಣಾದೆ

0715ಪಿಎಂ06022021
#ಅಮುಭಾವಜೀವಿ


ಅದೇಕೋ ಕಾಣೆ 
ಈ ಇರುಳು ಕೂಡ 
ಬೇಸರವ ಹಡೆಯುತಿದೆ
ನೀನಿಲ್ಲದ ಕಾರಣವಿರಬಹುದು? 

1038ಪಿಎಂ06022021
ಅಮುಭಾವಜೀವಿ

#ಅಮುಭಾವಬುತ್ತಿ 344

*ಮುಂಜಾನೆ ಭಾವ*

ಕತ್ತಲ ಎದೆಯಲ್ಲಿ 
ಬೆಳಕಿನ ಭರವಸೆ ತಂದು 
ಮುಂಜಾನೆಯ ಮಂಜಿನಲಿ
ನಿಸರ್ಗದ ಮೊಗ ಒರೆಸಿ 
ದಿನದಾರಭಕೆ ಸ್ವಾಗತಿಸಿದ
ಬಾಲ ಭಾಸ್ಕರ 

0712ಎಎಂ07022021
*ಅಮುಭಾವಜೀವಿ ಮುಸ್ಟೂರು*

ಭಾವನೆಗಳನ್ನೆಲ್ಲ ಬಿಟ್ಟು 
ಪರಿ ಚಿತ್ರವನ್ನು ನೋಡಿ 
ಇಲ್ಲಿ ಅಳೆಯುವರು ವ್ಯಕ್ತಿತ್ವ 
ಭಾವಕ್ಕೆ ಆಸರೆಯಾಗುವಂತೆ 
ಚಿತ್ರವೊಂದು ಹಿಂಪರದೆ 
ಅರಿಯದಾದರು ಅದರ ಮಹತ್ವ 


೧೨೨೫ಪಿಎಂ ೦೭೦೨೨೦೨೧
ಅಪ್ಪಾಜಿ ಎ ಮುಸ್ಟೂರು ಅಮು 

ಪ್ರೀತಿ ಇದು ಮನಸ್ಸಿನ ಪಿಸುಮಾತು 
ಪ್ರೀತಿ ಇದು ಹೃದಯದ ಸೊತ್ತು 
ಪ್ರೀತಿಯ ಪಾಲಿಸಿದರೆ ಇಲ್ಲ ಆಪತ್ತು 
ಪ್ರೀತಿಯೇ ಬಾಳಿನ ಮಹಾಸಂಪತ್ತು 


*ಜೊತೆಯಿರು ಸಾಕು*

ನೀನಂದ್ರೆ ನನಗಿಷ್ಟ 
ಬದುಕಿನ ಎಲ್ಲಾ ಕ್ಷಣ
ನೀ ಜೊತೆಯಿರೆ ಸಾಕು
ಬೇರೇನನು ನಾ ಬಯಸೆನು
ಬರಲಿ ನನಗೆ ನೂರು ಕಷ್ಟ 
ಇರಲಿ ಬದುಕಲಿ ತಲ್ಲಣ
ಎಲ್ಲಾ ಸಹಿಸಿ ಸುಖ ಕೊಡುವೆ
ನಿನ್ನ ತೊರೆದು ಇರಲಾರೆನು

0208ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


*ಗೆಲ್ಲುವ ಹಂಬಲ* 

ಉಕ್ಕಿ ಬರುತ್ತಿದೆ ಹುಮ್ಮಸ್ಸು 
ಸಾಧನೆಯ ಗುರಿ ಮುಟ್ಟಲು 
ಹರೆಯವಿದು ಸಕಾಲ
ಸಾಧಕನೆನಿಸಿಕೊಳ್ಳಲು
ಇರಲು ಎಲ್ಲರ ಬೆಂಬಲ
ಗೆದ್ದು ಬೀಗುವ ಹಂಬಲ
ನಿತ್ಯ ಹೋರಾಟದ ಈ
ಸ್ಪರ್ಧಾತ್ಮಕ ಯುಗದಲ್ಲಿ 

0216ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


*ಹಸಿರಾಗಲಿ ಬದುಕು*

ನೀರಸವಾಗದಿರಲಿ ಸಂಬಂಧ 
ಖುಷಿಯ ತರಲಿ ಅನುಬಂಧ 
ಪ್ರೀತಿಯ ಸೌಧದಲಿ ನಗುವಿರಲಿ
ಸ್ನೇಹದ ಹೊನಲು ಸದಾ ಬೆಳಗಲಿ 
ಬಾಳಹಾದಿಯು ತಣ್ಣೆಳಲ ತಾಣವಾಗಿ 
ಸಂಭ್ರಮದ ವರ್ಷಧಾರೆ ಸದಾ ಸುರಿದು
ನೆಮ್ಮದಿಯ ಹಸಿರಾಗಲಿ ಬದುಕು

0835ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


ನೀನೆಷ್ಟೇ ನನ್ನ ದೂರವಿರಿಸಿದರು 
ನೀ ನನ್ನ ಹೃದಯ ವಾಸಿಯಾಗಿರುವೆ
ನೀನೆಷ್ಟೇ ನನ್ನ ಅವಮಾನಿಸಿದರು 
ನಾ ನಿನ್ನ ಅಭಿಮಾನಿಯಾಗಿರುವೆ
ನೀನೆಷ್ಟೇ ನನ್ನನ್ನು ದ್ವೇಷಿಸಿದರೂ
ನಾ ನಿನ್ನ ಹುಚ್ಚನಂತೆ ಪ್ರೀತಿಸುವೆ 
ನೀವೆಷ್ಟೇ ನನ್ನನ್ನು ದೂರಿದರು 
ನಾನು ಸದಾ ನಿನ್ನ ಗೌರವಿಸುವೆ 
ನೀನಷ್ಟೇ ನನಗೆ ಮುಖ್ಯ 
ನನಗೆ ಬೇಕು ನಿನ್ನ ಸಖ್ಯ 
ಈ ಕ್ರೂರ ಜಗದೊಳಗೆ ಕ್ರೂರಿಯಾಗದೆ 
ನೀ ಬಂದೆನ್ನ ಸೇರು ತೊರೆಯದೆ 

೦೪೨೯ಎಎಂ೦೯೦೨೨೦೨೧
ಅಪ್ಪಾಜಿ ಎ ಮುಷ್ಟೂರು 

ಪ್ರಿಯೆ ನಿನ್ನ ಕಣ್ಣ ಬೆಳಕು 
ತೊಳೆಯಿತೆನ್ನ ಮನದ ಕೊಳಕು 
 ನೀ ತೋರಿದ ಒಲವು 
ಮರೆಸಿತು ನನ್ನೆದೆಯ ನೋವು  

ನಿನ್ನ ನೋಟ ಒಂದು ಕವಿತೆ 
ನಾನಲ್ಲಿ ಬೆಳಗುವ ಹಣತೆ 
 ನೀನಿರಲು ನನ್ನ ಸನಿಹ 
ಎಂದೆಂದೂ ಬಾಧಿಸದು ವಿರಹ 

ಕ್ಕೆ ನಿನ್ನೆರಡು ನಯನಗಳು 
ರವಿಚಂದ್ರರಂತೆ ಬೆಳಕಾಗಿರಲು 
ಇನ್ನೂ ಇರುಳ ಭಯ ನನಗಿಲ್ಲ 
ಇರುವಾಗ ನಿನ್ನೊಲವ ಬೆಂಬಲ

ಸದ್ದಿಲ್ಲದೆ ಸೇರಿದೆ ನನ್ನೊಳಗೆ 
ಮದ್ದಾದೆ ನನ್ನೆಲ್ಲಾ ನೋವಿಗೆ 
ನೆನಪುಗಳ ಸೋನೆ ಸುರಿದಿರಲು 
ಎದೆ ಗುಡಿಯು ನಿನಗಷ್ಟೆ ಮೀಸಲು 


ನೀನಾದೆ ಜೊತೆಗಾತಿ ನನಗಿಂದು
ಕೈಬಿಡದೆ ಮುನ್ನಡೆಸು ಎಂದೆಂದೂ 
ನೀ ನನ್ನ ಬಾಳ ಅಮೃತಸಿಂಧು 
ನನ್ನೆಲ್ಲಾ ನೋವು ನಲಿವುಗಳ ಆತ್ಮಬಂಧು 

ನಿನ್ನಿಂದಲೇ ಸಂಭ್ರಮಿಸಿದೆ ಈ ಜೀವನ 
ನೀನಲ್ಲವೆ ನನ್ನ ಬಾಳ ಸಂಜೀವನ 

೦೪೫೭ಎಎಂ೦೯೦೨೨೦೨೧
ಅಪ್ಪಾಜಿ ಎ ಮುಸ್ಟೂರು

*ನೀನಿರದೆ*

ನಿನ್ನನೆಂದು ಕೈಬಿಡೆನು
ನೀನಿರದೆ ನಾ ಬಾಳೆನು
ನಿನ್ನೊಲವಿಗಾಗಿ ಹಂಬಲಿಸೋ 
ನಾ ಹಸುಗೂಸಿನಂತೆ
ನಿನ್ನೊಡಲ ಮಡಿಲಲ್ಲಿ 
ನಾ ಮರೆವೆ ಎಲ್ಲಾ ಚಿಂತೆ 
ದೂರ ಹೋಗಿ ನೋವ ನೀಡದಿರು
ಭಾರವಾದ ನನ್ನಿ ಹೃದಯಕೆ
ಪ್ರೀತಿಯ ತಂಗಾಳಿ ಸವರಿ 
ತಣಿಸುತಿರು ಒಲವೇ ನಿತ್ಯ 

0228ಪಿಎಂ11022021
*ಅಪ್ಪಾಜಿ ಎ ಮುಸ್ಟೂರು*

No comments:

Post a Comment