Wednesday, April 7, 2021

ರೈತ

*ನಮ್ಮ ಅನ್ನದಾತ*

ರೈತ ನಮ್ಮ ಅನ್ನದಾತ
ಆದರೆ ಇಂದು ಅವನು ಶೋಷಿತ

ಮಳೆಗಾಗಿ ಕಾದು ಕುಳಿತು
ಬಂದ ಒಡನೆ ಉಳುಮೆಗೈದು
ಬೀಜ ಬಿತ್ತಿ ಮೊಳೆಯುವಾಗ
ಮತ್ತೆ ಮುಗಿಲ ಬೇಡುವನು

ಬೆಳೆದ ಬೆಳೆಗೆ ಬೆಲೆಯಿಲ್ಲದೆ
ಸಾಲದ ಶೂಲಕೆ ಕೊರಳೊಡ್ಡಿ
ಬೇಸಾಯದೊಂದಿಗೆ ಸಾಯುವ
ಹತಭಾಗ್ಯ ಭೂತಾಯಿಯ ಮಗ

ಸುಳ್ಳು ಭರವಸೆಗಳ ನಂಬಿ 
ಎಲ್ಲಾ ಹುಸಿಯಾಗಲು ಕುಗ್ಗಿ 
ನಂಬಿದವರನೆಲ್ಲ ಅನಾಥರಾಗಿಸಿ
ಆತ್ಮಹತ್ಯೆಗೆ ಶರಣಾದನು

ಭೂಮಿ ಉಳುವವನಿಗೆ
ಬೆಲೆ  ಸಿಗಲೇಬೇಕು
ರೈತ ಬೆಳೆದರೆ ತಾನೆ
ನಮಗೆಲ್ಲ ನೆಮ್ಮದಿಯ ಬದುಕು 

ವ್ಯವಸಾಯವೇ ಅಭಿವೃದ್ಧಿಯ
ಮಂತ್ರವಾಗಬೇಕು
ವ್ಯವಸ್ಥೆಯಲ್ಲಿ ರೈತನಿಗೆ 
ಮೊದಲ ಆದ್ಯತೆ ನೀಡಬೇಕು 

0854ಎಎಂ01082018
*ಅಮು ಭಾವಜೀವಿ*
ಚಿತ್ರದುರ್ಗ 

No comments:

Post a Comment