Wednesday, April 7, 2021

ಮೂಡುತಿದೆ ಬೆಳಗುt5t
ನೋಡದರ ಸೊಬಗು 
ಮುಂಜಾನೆಯ ಹೊತ್ತು 
ಪ್ರಕೃತಿಯ ಸಂಪತ್ತು 

ಎಲೆಗಳ ಒಡಲ ಮೇಲೆ 
ಹೊಳೆವ ಇಬ್ಬನಿ ಮಾಲೆ 
ಉಲಿವ ಹಕ್ಕಿಗಳಿಂಚರ
ಸುಪ್ರಭಾತದ ಸುಸ್ವರ

ತಂಗಾಳಿಗೆ ತಣಿದ ಇರುಳಿಗೆ
ವಿಶ್ರಾಂತಿಯ ಜೋಗುಳ
ದಿನ ತೆರೆಯಿತು ಇನ ಬರಲು
ಇನ್ನಿಲ್ಲ ಕತ್ತಲಿನ ಉಪಟಳ 

ಜೀವ ಚೇತನದ ಮುಂಜಾವು 
ಭಾವ ಹೊಮ್ಮಿಸುತಿಹ ಸುಮವು
ಇನ್ನು ದಿನವೆಲ್ಲ ಹೊಸತನ
ಕಾಯಕಕೆ ಅಣಿಗೊಳಿಸುವ ಕ್ಷಣ

ಏಳಿ ಎದ್ದೇಳಿ ಬೆಳಕಾಯಿತು
0630ಎಎಂ11082018

No comments:

Post a Comment