Wednesday, April 7, 2021

*ಪಂಚ ಸೂತ್ರಗಳು*

*ನಂಬಿಕೆ* ಯು ಇರಬೇಕು 
ಇಡುವ ಪ್ರತಿ ಹೆಜ್ಜೆಯಲ್ಲೂ
ಜೊತೆ ಬಾಳುವ ಪ್ರತಿ ಜೀವಿಯಲ್ಲೂ
ಹಿತ ಬಯಸುವ ಪ್ರತಿ ಸಂಬಂಧದಲ್ಲೂ

*ಗೌರವ* ಪಡೆಯಬೇಕು
ಜೀವನದ ಈ ಪಯಣದಲ್ಲಿ 
ಬದುಕುವ ರೀತಿಯಲ್ಲಿ 
ಗೆಲುವಿನ ಈ ಹೋರಾಟದಲ್ಲಿ 

*ಪ್ರೀತಿ* ಯಲಿ ಬಾಳಬೇಕು 
ಪ್ರತಿ ಜೀವಿಯನೂ ಪ್ರೀತಿಸಬೇಕು 
ಪ್ರೀತಿ ಬದುಕಿನ ಗುರಿಯಾಗಬೇಕು
ಪ್ರತಿ ಎದೆಯಲೂ ಜಾಗ ಪಡೆಯಬೇಕು 

*ಭಾವನೆ* ಗಳ ಹಂಚಿಕೊಳ್ಳುತ
ಇತರರ ಭಾವನೆಗಳ ಗೌರವಿಸಬೇಕು
ಧನಾತ್ಮಕ ಭಾವನೆ ಹೊಂದಬೇಕು 
ನೋವು ನಲಿವುಗಳ ಹಂಚಿಕೊಳ್ಳಬೇಕು 

*ಸಾಮರಸ್ಯ* ದಿ ಬಾಳಬೇಕು 
ಪರಸ್ಪರರ ಆದರಿಸಬೇಕು
ಕೊಡು ಕೊಳ್ಳುವ ಮನಸಿದ್ದರೆ 
ನೆಮ್ಮದಿಯ ಸೂರಾಗುವುದೀ ಧರೆ

ನಂಬಿಕೆಯ ದೋಣಿಯಲಿ
ಗೌರವದ ಯಾತ್ರೆಯಲಿ 
ಪ್ರೀತಿಯ ಗುರಿ ಮುಟ್ಟಲು 
ಭಾವನೆಗಳ ಸಾಮರಸ್ಯವಿರಲಿ

0646ಎಎಂ03052019

*ಅಮು ಭಾವಜೀವಿ*

No comments:

Post a Comment