Wednesday, April 7, 2021

*ಉಳಿಯಬೇಕು ರೈತ*


ದೇಶದ ಹಸಿವ ನೀಗಿಸುವ
ರೈತ ನಿನಗೆ ವಂದನೆ 
ಬೆವರು ಹರಿಸಿ ದುಡಿಯುವ 
ಅನ್ನದಾತ ನಿನಗೆ ಅಭಿನಂದನೆ 

ಉಳುಮೆ ನಿನ್ನ ಕಾಯಕ 
ದುಡಿಮೆ ಅದಕ್ಕೆ ಪ್ರಚೋದಕ 
ಉತ್ತಿ ಬಿತ್ತಿ ಬೆಳೆವ ನೀನು 
ಭೂಮಿ ತಾಯಿಯ ಚೊಚ್ಚಲ ಮಗನು

ಸೃಷ್ಟಿ ದೃಷ್ಟಿಯ ಮೇಲಾಟದಲ್ಲಿ 
ಸಮಷ್ಟಿಹಿತ ನಿನ್ನ ಪೂಜೆ 
ಅತಿವೃಷ್ಟಿ ಅನಾವೃಷ್ಟಿ ಏನೇ ಬರಲಿ
ದುಡಿಯುತಲಿರುವುದೇ ನಿನ್ನ ಪೂಜೆ 

ಬಿಸಿಲು ಮಳೆಗೆ ಅಂಜದೆ 
ಹಗಲು ಇರುಳು ಎನ್ನದೆ 
ನೇಗಿಲ ಧರ್ಮವ ನಂಬಿದ ರೈತ 
ದೇಶಕ್ಕೆಲ್ಲ ಅವನೇ ಅನ್ನದಾತ 

ಬೆಳೆದ  ಬೆಳೆಗೆ ಬೆಲೆ ಸಿಗದಿದ್ದರೂ 
ತಾನು ಬಳಲಿ ಬಸವಳಿದರೂ
ಕಾಯಕ ಬಿಡದ ನೇಗಿಲಯೋಗಿ 
ಕವಿಭಾವದಿ ಸೃಷ್ಟಿನಿಯಮದ ಭೋಗಿ 

ಉಳಿಯಬೇಕು ರೈತ ನೀನು 
ಎಲ್ಲರ ನೆಮ್ಮದಿಯ ಬಾಳಿಗಾಗಿ 
ತೊಳೆಯುವವನು ಕೂಡ ನಿನ್ನನೇ 
ನಂಬಿ ಹನು ತನ್ನ ಉನ್ನತಿಗಾಗಿ 

ರೈತ ನೀನು ಬೆಳೆದ ಧಾನ್ಯ 
ಸಕಲ ಜೀವಿಗಳಿಗೂ ಅತ್ಯಮೂಲ್ಯ 
ಎದೆಗುಂದದ ನಿನ್ನ ದುಡಿಮೆ 
ದೇಶಕ್ಕೆ ನಿನ್ನಿಂದಲೇ ಹಿರಿಮೆ 

೦೮೨೭ಎಎಂ ೨೩೧೨೨೦೨೦
ಅಪ್ಪಾಜಿ ಎ ಮುಷ್ಟೂರು 


*ಮಾತು ಮನ ಕೆಡಿಸಿತು*

ಮಾತಿಗೆ ಮಾತು ಬೆಳೆಯಿತು 
ಮಾತಿನ ಹಿಂದಿನ ಕಾಳಜಿ ಮರೆತು ಹೋಯಿತು 
ಪ್ರತಿ ಮಾತಲ್ಲೂ ತಪ್ಪನ್ನೇ ಹುಡುಕುತ್ತಾ 
ಪ್ರೀತಿಯ ಛಾಯೆ ಪೆಡಂಭೂತವಾಗಿ 
ಇದ್ದ ಸಲಿಗೆ ದ್ವೇಷಕ್ಕೆ ತಿರುಗಿ 
ಮಾತಿನ ಹಿಂದಿನ ಉದ್ದೇಶ ಅರಿಯದೆ 
ಪರಸ್ಪರ ದೂರುತ್ತಾ ದೂರಾದವು ಮನ 
ಕಾರಣವಿಲ್ಲದೆ ನೊಂದವು ದಿನ 
ಯಾರದೋ ಮಾತಿನಲ್ಲಿರುವ ನಂಬಿಕೆ 
ಹೃದಯವಾಸಿಯ  ಮೇಲೆ ಇಲ್ಲದಾಯ್ತು 
ಸಂಬಂಧ ಹಳಸಿ ಹೋಯ್ತು 
ಅನುಬಂಧ ಕಳಚಿಕೊಂಡಿತು 
ಎರಡೂ ಹೃದಯಗಳ ಸೇತುವೆಯಾಗಿದ್ದ ಮಾತು
ಎರಡು ಮನಗಳ ಮಧ್ಯೆ ಗೋಡೆ ಎದ್ದಿತು  
ಮಾತು ಮನಗಳ ಕೆಡಿಸಿತು 
ಹೃದಯ ಗಾಯಗೊಂಡು ನೊಂದಿತು
ಮಾತು ಮೌನಗಳ ಸಮ್ಮಿಳಿತ 
ಇಲ್ಲದೆ ಮರೆಯಾಯ್ತು ಬಾಳ ಹಿತ 

೦೬೨೨ಎಎಂ೨೪೧೨೨೦೨೦
*ಅಪ್ಪಾಜಿ ಎ ಮುಸ್ಟೂರು* 

*ಮರೆಯಲಾರೆ*

ಯಾರೋ ಏನೋ ಅಂದರು ಎಂದು 
ನನ್ನೆದೆಯ ಭಾವಗಳ ಅವಮಾನಿಸಿದೆ
ಏನೋ ಮಾಡಲು ಹೋಗಿ ಇಂದು 
ಅನುಬಂಧದ ಬುಡ ಕಡಿದೆ
ನಂಬಿಕೆಯ ಪಯಣದಲ್ಲಿ ಅಂಜಿಕೆಯಿಲ್ಲದೆ
ಅನುಮಾನದಿ ನೆರಳೀಯದೆ ನರಳಿಸಿದೆ
ಮರೆಯಲಾಗದ ನಿನ್ನ ನೆನಪುಗಳ 
ಒತ್ತಡದ ದಟ್ಟಡವಿಯಲಿ ಒಂಟಿ ಮಾಡಿದೆ
ನೊಂದ ಜೀವದ ಬೆಂದ ಭಾವಗಳ
ಸಂತೆಯಲಿ ಹಂಚುತಿಹೆನು 
ಬೇಕಾದವರು ಬೇಕೆಂದು ಎತ್ತಿಕೊಂಡು
ಮನದ ಭಾರವನಿಳಿಸಿ ಸಂತೈಸಿದರು

0741ಪಿಎಂ24122020
*ಅಪ್ಪಾಜಿ ಎ ಮುಸ್ಟೂರು*

*ಹರಿತ ಮಾತು*

ಇಷ್ಟು ತೀವ್ರವಾಗಿರುತ್ತೆಂದು ಊಹಿಸಿರಲಿಲ್ಲ 
ನಿನ್ನ ಹರಿತವಾದ ಮಾತು 
ಅದು ಎದೆಯನಿರಿದು ನೆತ್ತರು ಚಿಮ್ಮಿ 
ಹೃದಯವನು ಗಾಯಗೊಳಿತು
ನೀ ನಡೆದುಕೊಂಡು ಈ ರೀತಿ 
ಘಾಸಿಗೊಳಿಸಿತು ನಿನ್ನ ನೀತಿ 
ನಿನ್ನ ನಾಟಕದ ಮುಂದೆ 
ನನ್ನ ಪ್ರಾಮಾಣಿಕತೆ ಸೋತಿದೆ
ನಿನ್ನ ಆಟದ ಹಿಂದೆ 
ಇಂತಹ ಘೋರ ಉದ್ದೇಶವಿತ್ತೆ 
ಏನೇ ಆದರೂ ನೀ ಹೀಗಾಗಬಾರದಿತ್ತು
ಜನುಮಕಾಗುವಷ್ಟು ನೋವ ನನಗಿತ್ತು 
ಖುಷಿ ಪಡುತಿರುವ ನಿನ್ನೊಳಗಿನ 
ಆತ್ಮಸಾಕ್ಷಿಗೆ ಅರಿವಿದೆ
ನನ್ನ ಆತ್ಮಸ್ಥೈರ್ಯ ಕುಂದಿಸದೆ
ಬಾಳು ನಂದಿಸದಿರು ಒಲವೇ 

0916ಪಿಎಂ25122020
*ಅಪ್ಪಾಜಿ ಎ ಮುಸ್ಟೂರು*

*ಟಂಕಾ*

ಎದೆಯ ನೋವು
ಹೃದಯದುಂಬಿ ನನ್ನ 
ಕಣ್ಣ ಕಂಬನಿ
ಮನವ ತೊಳೆಯಲು 
ವೇದನೆಯು ದೂರಾಯ್ತು

0812ಪಿಎಂ26122020
*ಅಪ್ಪಾಜಿ ಎ ಮುಸ್ಟೂರು*

*ಪ್ರೀತಿ ಅಮಲು*

ಪ್ರೀತಿ ಜೇನಿನಂತೆ
ಸವಿಯಾದ ಅನುಭೂತಿ 
ಇಷ್ಟ ಪಟ್ಟಿದ್ದು ಕೈಗೆಟುಕಲು
ಪ್ರೀತಿ ಒಮ್ಮೊಮ್ಮೆ 
ಕುಟುಕಿದಾಗ ಯಾತನೆ
ಇಷ್ಟವಿಲ್ಲದೇ ಪಡೆಯ ಬಯಸಲು
ಪ್ರೀತಿ ಅಮಲು 
ಸವಿದಾಗಲೂ ಕಚ್ಚಿಸಿಕೊಂಡಾಗಲೂ
ಕಾಯುವ ಯಾತನೆಯೂ ಹಿತಕರವೂ
ಅದು ಹೃದಯದ ಭಾವಗಳಿಗೆ ಬಿಟ್ಟದ್ದು 

0853ಪಿಎಂ26122020
*ಅಪ್ಪಾಜಿ ಎ ಮುಸ್ಟೂರು*

#ಅಮುಭಾವಬುತ್ತಿ ೨೬೯

*ನಾಳೆಯ ಭರವಸೆಯೊಂದಿಗೆ*

ಅವಳು ಬಿಟ್ಟು ಹೋದ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ ಕೊಲ್ಲುತ್ತಿವೆ
ಬಯಕೆಗಳ ಬೇಲಿ ದಾಟಿ ಬಂದವಳು 
ಬರಿ ಬವಣೆಗಳ ಕೊಟ್ಟ ಕಾರಣ ನೊಂದಿಹೆ
ಭಾವನೆಗಳ ಸಾಂಗತ್ಯದಲ್ಲಿ ಹೊಮ್ಮುವ ಪದಗಳ 
ಕಟ್ಟಿ ಹಾಕಬಹುದೇ ಎದರಿಸುವ ತಂತ್ರಗಳಿಂದ 
ಬಣ್ಣದ ಚಿಟ್ಟೆಯ ಸ್ನೇಹವ  ಮಾಡಿ 
ನೋವಿನ ಬೆಂಕಿಯಲ್ಲಿ ಬಿದ್ದು ಹೊರಳಾಡ್ತಿದೆ 
ನ್ಯಾಯಸಮ್ಮತ ನಡವಳಿಕೆಯಿಂದಾಗಿ 
ಇನ್ನೂ ನಂಬಿಕೆ ಉಳಿಸಿಕೊಂಡಿರುವೆ
ನಾಳೆ ಎಂಬ ಭರವಸೆಯೊಂದಿಗೆ 

೦೪೧೯ಎಎಂ೨೭೧೨೨೦೨೦
*ಅಪ್ಪಾಜಿ ಎ ಮುಷ್ಟೂರು* 
 

*ನಿನ್ನ ಬೆಂಬಲವೇ*

ನಿನ್ನ ಬಾಹುಬಂಧನವೇ ಸ್ವರ್ಗ
ಜೊತೆಯಲ್ಲಿ ನೀನಿದ್ದರೆ ಅದೇ ಜೀವನ 
ಪ್ರೀತಿಯ  ಸಮ್ಮಿಳಿತದ ಸಂಬಂಧ 
ಸ್ನೇಹ ಛಾಯೆಯ ಅನುಬಂಧ 
ಬಾಳ ಪಯಣದಲ್ಲಿ ಅದುವೇ ಮಧುಚಂದ್ರ 
ನಿನ್ನ ನಗುವೇ ಎಲ್ಲಕ್ಕೂ ಸ್ಫೂರ್ತಿ 
ಬೆನ್ನ ಹಿಂದಿನ ನಿನ್ನ ಬೆಂಬಲವೇ 
ಕಲ್ಲು ಮುಳ್ಳು ಹಾದಿಯಲ್ಲಿ 
ಗೆಲ್ಲುವ ಭರವಸೆ ತುಂಬಿದೆ 
ನೀನಿರುವ ತನಕ ನನಗೆ ನಿಶ್ಚಿಂತೆ 
ನೀನಿರುವ ಖುಷಿಯಲ್ಲಿ ಇಲ್ಲ ಕೊರತೆ 
ನಿನ್ನೊಳಗೆ ನಾ ಅನುರಕ್ತನಾದೆ 
ನಿನ್ನಾಸರೆಯೊಳಗೆ ಬೆಳೆವ ಬಳ್ಳಿಯಾದೆ
ನಾಳೆಯ ನೀರೀಕ್ಷೆ ನನಗಿಲ್ಲ
ಇಂದಿನ ಪರೀಕ್ಷೆ ಗೆದ್ದು ಬೀಗುವೆನು 

೦೪೩೪ಎಎಂ೨೭೧೨೨೦೨೦
ಅಪ್ಪಾಜಿ ಎ ಮುಸ್ಟೂರು 

No comments:

Post a Comment