*ಕರೆದರೂ ಕೇಳದಂತೆ*
ಕರೆದರೂ ಕೇಳದಂತೆ
ಎಲ್ಲಿಗೆ ಹೊರಟಿರುವೆ ನಲ್ಲ
ಈ ಏಕಾಂತವೂ ಬೇಸರ ತರಿಸಿದೆ
ನಿನಗೇಕೆ ಮಾತಾಡುವ ಮನಸ್ಸಿಲ್ಲ
ಪ್ರೀತಿಯಲ್ಲಿ ಅನುಮಾನ ಬೇಡವೇ ಬೇಡ
ಅದರಿಂದ ಕಾಡುವುದು ದುಗುಡ
ಕೇಳು ನೀನೊಮ್ಮೆ ಮನದ ಮಾತು
ಆ ಹಳೆಯ ಕಹಿ ಘಟನೆಗಳನ್ನೆಲ್ಲ ಮರೆತು
ನಿಸರ್ಗದ ಈ ಸುಂದರ ತಾಣ
ಚೆಲುವಿಲ್ಲ ಅದಕ್ಕೂ ಹಿಡಿದಿದೆ ಗ್ರಹಣ
ಒಮ್ಮೆ ಹಿಂತಿರುಗಿ ನೋಡಿ ಮಾತಾಡಿಸು
ಎದೆಯ ವೇದನೆಯ ನೀ ನೀಗಿಸು
ಈ ಮಂಜಿನಂತೆ ಕರಗಿ
ಹೋಗಲಿ ನಿನ್ನೊಳಗಿನ ಮೌನ
ಈ ಪ್ರಕೃತಿಯ ಮಡಿಲೊಳಗೆ
ನಾವು ಒಂದಾದರೆ ಸುಂದರ ಜೀವನ
ತೊರೆದು ಹೋಗದಿರು ದೂರ
ಕಳೆದುಕೊಂಡ ಹೃದಯದ ಭಾರ
ಅರ್ಥವಾಗದು ನಿನಗೆ ಈಗ
ಅದಕ್ಕೂ ಮುಂಚೆ ನೀ ಬಂದು ಸೇರು ಬೇಗ
ನನ್ನ ತೋಳುಗಳು ಕಾತರಿಸುತ್ತಿವೆ
ನಿನ್ನ ಆಸರೆಯ ಬಯಸಿ
ಈ ನಮ್ಮ ಅನುಬಂಧ ಬೆಸೆಯಲಿ
ಖುಷಿಯಿಂದ ಬಾಳೋಣ ಸಂಭ್ರಮಿಸಿ
೦೮೧೫ ಎಎ೦೨೫೦೨೦೨೦
*ಅಮು ಭಾವಜೀವಿ ಮುಸ್ಟೂರು*
*ನಮಸ್ತೇ ಅಮು ಭಾವಜೀವಿ ಸರ್ 💐 🤝 🙏*
*ಕರೆದರೂ ತಿರುಗಿ ನೋಡದ ನಲ್ಲನಿಗೆ ಬರೆದ ನುಡಿಗಳು ಚಂದದ ಸಾಂಗತ್ಯವಿಲ್ಲದ ಬದುಕು ಶೂನ್ಯ ನನ್ನ ಬಿಟ್ಟು ಹೋಗಬೇಡ ನನ್ನ ಜೊತೆ ಮಾತಾಡಲು ಮನಸು ಇಲ್ಲವೇ.... 👌👌*
*ಯಾವಾಗ ಪ್ರೀತಿಯಲ್ಲಿ ಅನುಮಾನ ಬರುತ್ತೊ ಅವತ್ತೆ ನಮ್ಮ ಮನಸು ಮಸಣದ ಹೆಣವಾಗಿ ಬಿಡುತ್ತದೆ ಮನದ ಮಾತ ಕೇಳದೇ ಹೋಗಬೇಡ ಮುಂದೆ ಬದುಕೋಣ ಕಹಿ ಘಟನೆಗಳ ಮರೆತು 👌👌*
*ನಾವಿಲ್ಲಿ ಕೂಡಿರುವುದು ನಿಸರ್ಗದ ಮಡಿಲಲ್ಲಿ ಅದೇಕೆ ಮುಖ ತಿರುಗಿ ನಿಂತಿರುವೆ ಆ ಸೂರ್ಯನಿಗೆ ಇಡಿದಂಗೆ ನಿನಗೂ ಗ್ರಹಣ ಇಡಿದಿದೆಯಾ... ಒಂದೇ ಒಂದು ಸಾರಿ ನೀ ನನ್ನ ತಿರುಗಿ ನೋಡು ನಮ್ಮಿಬರ ಬಾಳಾಗುವುದು ಸುಖ ಸಂತೋಷದ ಬೀಡು 👌👌*
*ಒಟ್ಟಾರೆ ಕವನ ಚೆನ್ನಾಗಿದೆ ಶುಭವಾಗಲಿ ನಮಸ್ಕಾರ 🙏*
*ಪ್ರೇಮಾರ್ಜುನ*
ಸುರೇಶ್ ನೇಗಿಲಗುಳಿ ಅವರ ಅಭಿಪ್ರಾಯ
ಕಿವಿ ಕಿವುಡಾಗುಸಿದ ಬಗ್ಗೆ ದುಗುಡ,ಒಲವು ಇಲ್ಲದಾಗಲು ಸಾಧ್ಯವೇ?ಜೊತೆ ಸೇರುವ ಸಮಯ ಸನ್ನಿವೇಶವನ್ನು ಪರಿಗಣಿಸು,ಬಂದು ಬಿಡು ಎಂಬ ಭಾವ ಕೊಟ್ಟವು
ಎಂಎನ್ ತೇಜಸ್ವಿ: ಅದ್ಭುತವಾದ ಕವಿತೆಯ ಸಾಲುಗಳು 👌👌🌹
ರೇಷ್ಮ ಕಂದಕೂರು: Super sir
+91 97314 04138: ಮಾನವ ಮೂಳೆಮಾಂಸಗಳ ತಡಿಕೆ
ಪದಪ್ರಯೋಗ ಅದ್ಭುತ ಸಾಹಿತಿಗಳೇ
*ಅಮು ಭಾವಜೀವಿ ಮುಸ್ಟುರು ರವರ ಕವನ*
*ಕರೆದರೂ ಕೇಳದಂತೆ*
*ಮನಸ್ತಾಪ ಹೊಂದಿ ದೂರ ಸರಿಯುತ್ತಿರುವ ತನ್ನ ನಲ್ಲನಿಗೆ ಈ ಒಲವಿನ ಪ್ರೀತಿಯ ಹೃದಯದ ಮಾತುಗಳು ಕೇಳಿಸದೇ??.ಕರೆದರೂ ಕೇಳದಂತೆ ಏಕೆ ಈ ಮೌನ ಎಂದು ಮನದ ದುಗುಡವನ್ನು ವ್ಯಕ್ತಪಡಿಸುವ ಒಂದು ವಿರಹ ವೇದನೆ ತಾಳಲಾರದ ಹೆಣ್ಣಿನ ಧ್ವನಿಯಾಗಿ ಕವನ ಮೂಡಿ ಬಂದಿದೆ*
ಈ ಮಂಜಿನಂತೆ ಕರಗಿ
ಹೋಗಲಿ ನಿನ್ನೊಳಗಿನ ಮೌನ
ಈ ಪ್ರಕೃತಿಯ ಮಡಿಲೊಳಗೆ
ನಾವು ಒಂದಾದರೆ ಜೀವನ ಸುಂದರ
👆🏽👌🏽👌🏽👌🏽 *ಸರ್*
*ಧನ್ಯವಾದಗಳು*
*ಶಶಿಧರ್ ಅಮೃತಸಿಂಚನ*
No comments:
Post a Comment