Tuesday, March 30, 2021

*ಬೇಡ ಈ ದುಗುಡ*


ಈ ದುಗುಡ ನಿನಗೆ 
ಬೇಡ ಗೆಳತಿ 
ಮೌನ ತೊರೆದು ಮಾತಾಡು
ಏನೇ ಕಷ್ಟಗಳು ಬರಲಿ

ನೆರಳಾಗುತೀನಿ ನಾನು 
ಪ್ರತಿ ನರಳಾಟಕೂ
ಕೊರಳಾಗುತೀನಿ ನಾನು 
ಬದುಕಿನ ಪ್ರತಿ ಹೋರಾಟಕೂ

ಹಸಿರಾಗುತೀನಿ ನಾನು 
ನಿನಗೆ ಸಿರಿಯನ್ನು ತರಲು
ಹೆದ್ದಾರಿಯಾಗುತೀನಿ ನಾನು 
ನಿನ್ನ ಗುರಿಯನ್ನು ಸೇರಲು 

ಛಲದಿಂದ ಚಲಿಸು
ಫಲವನ್ನು ನಿರೀಕ್ಷಿಸದೇ
ಒಂದಡಿಯೂ ಮುಂದಿಡಬೇಡ
ನಿನ್ನ ದಾರಿಯನು ಪರೀಕ್ಷಿಸದೆ

ಆಸರೆಯ ಸೂರು ನಾನಾಗುವೆ
ಭೂಮಿಗೆ ಅಂಬರದಂತೆ
ಅಂದ ಆನಂದದ ಗಣಿಯಾಗು
ಇರುಳಿನ ಆ ಚಂದಿರನಂತೆ 

30082003
*ಅಮು ಭಾವಜೀವಿ*

No comments:

Post a Comment